ಬೆಂಗಳೂರು : ಅಪಘಾತ ಹೆಚ್ಚಾಗುವುದಕ್ಕೆ ರಸ್ತೆ ಹಾಳಾಗಿದೆ. ಕೆಟ್ಟು ಹೋಗಿದೆ. ಇದ್ರಿಂದ ಅಂತ ಮಾಧ್ಯಮದವರು ಹೇಳ್ತಾರೆ. ಆದ್ರೇ.. ಕೆಟ್ಟ ರಸ್ತೆ ಇದ್ರೆ ಆಕ್ಸಿಡೆಂಟ್ ಜಾಸ್ತಿ ಆಗುತ್ತೆ ಅಂತ ಯಾರು ಹೇಳಿದ್ರು.! ರೋಡ್ ಚೆನ್ನಾಗಿದ್ರೇನೇ ಆಕ್ಸಿಡೆಂಟ್ ಜಾಸ್ತಿ ಆಗೋದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಪ್ರತಿವರ್ಷ ರಾಜ್ಯದಲ್ಲಿ ಹತ್ತು ಸಾವಿರ ಅಪಘಾತಗಳು ಆಗುತ್ತಿವೆ. ಮಾಧ್ಯಮಗಳು ರಸ್ತೆ ಸರಿ ಇಲ್ಲ ಹಾಗೇ ಹೀಗೆ ಎಂದು ಸರ್ಕಾರವನ್ನು ದೂಷಿಸುತ್ತಿವೆ. ಆದ್ರೇ, ಒಳ್ಳೆಯ ರಸ್ತೆಗಳಿಂದಲೇ ಅಪಘಾತ ಸಂಭವಿಸುತ್ತೆ ಅನ್ನೋದು ನನ್ನ ನಂಬಿಕೆ ಎಂದು ಹೇಳಿಬಿಟ್ರು ಡಿಸಿಎಂ.!