ನವದೆಹಲಿ: ಮೊಬೈಲ್‌ನಲ್ಲಿ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳುವುದು ಇತ್ತೀಚಿಗೆ ಒಂದು ರೀತಿ ಟ್ರೆಂಡ್ ಆಗುತ್ತಿದೆ. ಹೊಸ ಟ್ರೆಂಡ್‌ಗೆ ಬೆರಗಾದ ಯುವಕರು ಹುಚ್ಚಾಟ ಪ್ರದರ್ಶಿಸುವುದಕ್ಕೆ ಹೋಗಿ ಪ್ರಾಣ ಕಳೆದುಕೊಳ್ಳುವಂತಾ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಮರುಕಳಿಸುತ್ತಿವೆ. ಅಂಥದ್ದೇ ಒಂದು ಘಟನೆ ಜಾರ್ಖಂಡ್‌ನ ರಾಮಘರ್‌ನಲ್ಲಿ ನಡೆದಿದೆ.

ಕಳೆದ ಭಾನುವಾರ ಮೇಲ್ ರೈಲ್ವೆ ನಿಲ್ದಾಣದ ಬಳಿ ಗೂಡ್ಸ್ ರೈಲಿನ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಹೋಗಿ ಯುವಕನೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಈ ಬಗ್ಗೆ ರೈಲ್ವೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಚಿತ್ರಾಪುರದ ರಾಜ್ರಪ್ಪಾ ಪೊಲೀಸ್ ಠಾಣೆ ವ್ಯಾಪ್ತಿಯ ಯುವಕನೊಬ್ಬ ತನ್ನ ಗೆಳೆಯರ ಜೊತೆಗೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದನು.