ಹೊಸದಿಲ್ಲಿ: ಕೃಷಿ ಕಾನೂನುಗಳ ಬಗ್ಗೆ ರೈತರು ಹಾಗೂ ಸರಕಾರದ ನಡುವೆ ಇರುವ ಗೊಂದಲ ನಿವಾರಿಸಲು ಸುಪ್ರೀಂಕೋರ್ಟ್ ನೇಮಿಸಿರುವ ನಾಲ್ವರು ಸದಸ್ಯರುಗಳ ಸಮಿತಿಯಿಂದ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್ ಹೊರಗುಳಿದಿದ್ದಾರೆ.
ರೈತರ ಹಿತಾಸಕ್ತಿಯೊಂದಿಗೆ ನಾನು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮಂಗಳವಾರ ಸುಪ್ರೀಂಕೋರ್ಟ್ ರಚಿಸಿರುವ ನಾಲ್ವರು ಸದಸ್ಯರುಗಳ ಪೈಕಿ ಒಬ್ಬರಾಗಿರುವ ಮಾನ್ ಹೇಳಿದ್ದಾರೆ.
ಸುಪ್ರೀಂಕೋಟ್ ರಚಿಸಿರುವ ಸಮಿತಿಯನ್ನು ಈಗಾಗಲೇ ತಿರಸ್ಕರಿಸಿರುವ ರೈತ ಸಂಘಟನೆಗಳು, ಎಲ್ಲ ಸದಸ್ಯರುಗಳು ಕೃಷಿ ಕಾನೂನುಗಳ ಪರವಾಗಿದ್ದಾರೆ ಎಂದಿದ್ದವು.
ನಾವು ಸಮಿತಿಯನ್ನು ಒಪ್ಪಿಕೊಳ್ಳುವುದಿಲ್ಲ. ಸಮಿತಿಯಲ್ಲಿರುವ ಎಲ್ಲ ಸದಸ್ಯರುಗಳು ಸರಕಾರದ ಬೆಂಬಲಿಗರಾಗಿದ್ದಾರೆ.ಇವರೆಲ್ಲರೂ ಈ ಹಿಂದೆ ಕಾಯ್ದೆಗಳನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಪಂಜಾಬ್ ರೈತ ಸಂಘಟನೆಗಳು ಹೇಳಿಕೆ ನೀಡಿವೆ.