ಬೆಂಗಳೂರು: ರೈತರ ಸಾಲ ಮನ್ನಾ ಮಾಡುವ ವಿಚಾರಕ್ಕೆ ಸಂಬಂಧಸಿದಂತೆ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿಲುವಿಗೆ ಸೋಮವಾರ ಬಂದ್ ಕೆರನೀಡಿದ್ದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪರ ವಿರುದ್ಧ ವಕೀಲರೊಬ್ಬರು ದೂರಿ ದಾಖಲಿಸಿದ್ದಾರೆ.

ವಿಪಕ್ಷನಾಯಕ ಯಡಿಯೂರಪ್ಪ ನವರು  ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ₹ 57 ಸಾವಿರ ಕೋಟಿ ಜತೆಗೆ ಖಾಸಗಿಯವರ ಬಳಿ ಮಾಡಿರುವ ಸಾಲವನ್ನೂ ಮನ್ನಾ ಮಾಡುವುದಾಗಿ ಹೇಳಿದ್ದೀರಿ. ಅದರಂತೆ ಮನ್ನಾ ಮಾಡಿ. ಮಾತು ತಪ್ಪಿದರೆ, ಸೋಮವಾರ ಕರ್ನಾಟಕ ಬಂದ್‌ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ಘೋಷಿಸಿ, ಕಲಾಪವನ್ನು ಬಹಿಷ್ಕರಿಸಿ ಹೊರ ನಡೆದಿದ್ದು ನೆನಪಿರಬೇಕಲ್ವ

 

ಈ ವಿಚಾರವನ್ನು ಮುಂದಿಟ್ಟುಕೊಂಡು ಪಿಸಿಸಿ ಕಾನೂನು ಘಟಕ ವಕೀಲ ಸೂರ್ಯ ಮುಕುಂದ್ ರಾಜ್ ಅವರು ಯಡಿಯೂರಪ್ಪ ವಿರುದ್ದ ಪಿಸಿಸಿ ಡಿಜಿಪಿಗೆ ದೂರು ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಬಂದ್ ಅಕ್ರಮ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಹಾಗಾಗಿ ಬಂದ್ನಿಂದ ತೊಂದರೆ ಆಗುತ್ತದೆ ಎಂದು ದೂರು ದಾಖಲಿಸಿದ್ದಾರೆ.