ಬೆಂಗಳೂರು : ರೈತರು ಸಂಕಷ್ಟದಲ್ಲಿದ್ದಾರೆ ಅವರ ನೆರವಿಗೆ ಶಾಸಕರು ಹಾಗೂ ಸರಕಾರಿ ನೌಕರರು ತಮ್ಮ ಸಂಬಳವನ್ನು ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡಲಿ ಎಂದು  ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಹೇಳಿದರು.

ಅವರು ಇಂದು ತಮ್ಮ ಒಂದು ತಿಂಗಳ 25 ಸಾವಿರ ಹಣವನ್ನು  ಮುಖ್ಯಮಂತ್ರಿಗಳ ಪರಿಹಾರ ನೀಧಿಗೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಪ್ರತಿಯೊಬ್ಬ ಶಾಸಕ ಹಾಗೂ ವಿಧಾನಪರಿಷತ್ ಸದಸ್ಯರು ತಮ್ಮ 1 ತಿಂಗಳ ಸಂಬಳವನ್ನು ಈ ರೈತರ ಸಾಲ ಮನ್ನಾ ಆಗಲು ಬಿಟ್ಟು ಕೊಡಬೇಕು ಎಂದು ಮನವಿ ಮಾಡಿಕೊಂಡರು..