ಬೆಂಗಳೂರು: ಬಜೆಟ್ ನಲ್ಲಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ರೈತರ ಸುಸ್ತಿ ಮತ್ತು ಚಾಲ್ತಿ ಮನ್ನಾ ಮಾಡುವುದಾಗಿ ಘೋಷಣೆಮಾಡಿದರು. ಇದರಿಂದ ರೈತರಿಗೆ ಸಂತೋಷವಾಯಿತು. ಆದ್ರೆ ಈ ಸಂತೋಷಕ್ಕೆ ಅಡಚಣೆ ಉಂಟಾಗುತ್ತಾ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ರಾಜ್ಯ ತೆಗೆದುಕೊಂಡಿರುವ ಸಾಲ ಮನ್ನಾ ನಿರ್ಧಾರ ಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಮಾಹಿತಿಯೂ ಇಲ್ಲ ಇದಲ್ಲದೇ ರಾಜ್ಯ ಸರಕಾರವು ಆರ್‍ ಬಿ ಐನಿಂದ ಒಪ್ಪಿಗೆ ಕೂಡ ಪಡೆದುಕೊಂಡಿಲ್ಲ ವಂತ.

ಸಾಲ ಮನ್ನಾ ಮಾಡಿದರೆ ಬ್ಯಾಂಕ್ ಗಳಿಗೆ ದೊಡ್ಡಮಟ್ಟದಲ್ಲಿ ಹೊಡೆತ ಬೀಳಲಿದೆ ಎನ್ನುವುದು ಬ್ಯಾಂಕ್ ಹಾಗೂ ಆರ್ ಬಿ ಐ ವಾದ. ಹಾಗಾಗಿ ಸಾಲ ಮನ್ನಾ ಎಂಬುದು ರೈತರಿಗೆ ಮರಿಚಿಕೆ ಆಗಬಹುದಾ.? ಕಾದು ನೋಡಬೇಕು.!