ಬೆಂಗಳೂರು: ನಿನ್ನೆ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಬಜೆಟ್ ನಲ್ಲಿ ರೈತರ 2 ಲಕ್ಷ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ ಆದ್ರೆ ಯಾವ ರೀತಿಯ ಸಾಲ ಹಾಗೂ ಯಾವ ಯಾವ ಬ್ಯಾಂಕುಗಳಲ್ಲಿರಿವ ಸಾಲ ಮನ್ನಾ ಆಗಲಿದೆ ಎಂಬ ಮಾಹಿತಿ.

ರಾಷ್ಟ್ರೀಕೃತ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಖಾಸಗಿ ಮತ್ತು ಪ್ರಾಥಮಿಕ ಸಹಕಾರಿ ಕ್ರೆಡಿಟ್ ಸೊಸೈಟಿಗಳು, ರೈತರ ಸಹಕಾರ ಸೇವಾ ಕೇಂದ್ರದಿಂದ ಪಡೆದ ಸಾಲಗಳು, ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ಪಡೆದ ಸಾಲಗಳು ಮನ್ನಾ ಆಗಲಿವೆ.

ಬೆಳೆಸಾಲ, ಮರು ವರ್ಗೀಕರಣ ಆದ ಬೆಳೆ ಸಾಲ (ರಿಸ್ಟ್ರಕ್ಚರ್ಡ್ ಲೋನ್), ವರ್ಷದ ಅವಧಿಯ ಬೆಳೆ ಸಾಲ (NPA), ಒಂದು ವರ್ಷ ಅವಧಿ ಮೀರದ ಸಾಲಗಳು ಮನ್ನಾ ಆಗಲಿವೆ. ಕಿಸಾಸ್ ಕಾರ್ಡ್ ಸಾಲವೂ ಮನ್ನಾ. ಈಗಾಗಲೇ ಸಹಕಾರ ಸಂಘದ ಸಾಲಮನ್ನಾ ಆಗಿರುವ ರೈತರಿಗೆ ಈ ಸ್ಕೀಂ ಅನ್ವಯಿಸುವುದಿಲ್ಲವಂತೆ.

ಕೃಷಿ ಸಾಲ ಅತವಾ ಕಿಸಾನ್ ಕ್ರೆಡಿಟ್ ಕಾರ್ಡ್‌ ಸಾಲ ಮರುಪಾವತಿಸಿದ ರೈತರಿಗೆ 25000 ರೂಪಾಯಿ ಬಹುಮಾನದ ರೀತಿಯಲ್ಲಿ ಸರ್ಕಾರ ನೀಡಲಿದೆ. ಮರುಪಾವತಿ ಮಾಡಿದ ಸಾಲವು 25000 ಕ್ಕಿಂತಲೂ ಕಡಿಮೆ ಇದ್ದರೆ ಅಷ್ಟೆ ಮೊತ್ತವನ್ನು ವಾಪಸ್ಸು ನೀಡಲಾಗುತ್ತದೆಯಂತೆ.