ಬೆಳಗಾವಿ: ರಾಜ್ಯದ ರೈತರು 30 ಸಾವಿರ ಕೋಟಿ ಸಾಲ ಪಡೆದಿದ್ದಾರೆ. ಈ ಸಾಲ ಮನ್ನಾಗೆ ನಾಲ್ಕು ಕಂತು‌ ಪಡೆಯಲ್ಲ. ಬರುವ ಜುಲೈಗೆ ಏಕಕಾಲದಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದ್ರು.
ಕನ್ನಡ ಭವನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ರಾಷ್ಟ್ರೀಕೃತ ಬ್ಯಾಂಕ್​ನಲ್ಲಿರುವ ರಾಜ್ಯದ ರೈತರ ಸಾಲವನ್ನು ಮುಂದಿನ ಜುಲೈ ತಿಂಗಳಲ್ಲಿ ಮನ್ನಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ರೈತರು ಗೊಂದಲಕ್ಕೀಡಾಗಬಾರದು ಎಂದರು.