ಬೆಂಗಳೂರು: ಪಶುಗಳಿಗೆ ತುರ್ತಾಗಿ ತೊಂದರೆ ಎದುರಾದರೆ 1962 ಸಂಖ್ಯೆಗೆ ಕರೆ ಮಾಡಬೇಕು. ಈ ವೇಳೆ ರೈತರ ಮನೆ ಬಾಗಿಲಿಗೆ ವಾಹನ ಬರಲಿದೆ.

ವಾಹನದಲ್ಲಿ ನುರಿತ ತಜ್ಞರು ಇರಲಿದ್ದು, ಅವರು ಪಶುಗಳಿಗೆ ಚಿಕಿತ್ಸೆ ನೀಡುತ್ತಾರೆ. ‘ಪಶು ಸಂಜೀವಿನಿ’ ಹೆಸರಿನಲ್ಲಿ ಈ ಸೇವೆ ಲಭ್ಯವಿದೆ.

ವಿಧಾನಸೌಧದ ಮುಂಭಾಗದಲ್ಲಿ ಈ ವಾಹನಕ್ಕೆ ಸಿಎಂ ಚಾಲನೆ ನೀಡಿದರು. ನಂತರ ಗೋವಿಗೆ ಸಿಎಂ ಯಡಿಯೂರಪ್ಪ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಕೂಡ ಭಾಗವಹಿಸಿದ್ದರು.