ದಾವಣಗೆರೆ: ರೈತರಿಗೆ ಬ್ಯಾಂಕ್‍ಗಳು ಕಿರುಕುಳ ನೀಡಿದರೆ ಸಹಿಸುವುದಿಲ್ಲ. ಈ ಉದ್ಧಟತನ ಮುಂದುವರೆದರೆ ನಮ್ಮ ಬಳಿ ಕೆಲವು ಅಸ್ತ್ರಗಳಿವೆ. ಅದನ್ನು ಪ್ರಯೋಗಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬ್ಯಾಂಕ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕ್‍ನವರು ನಮ್ಮ ಆದೇಶಕ್ಕೆ ಬೆಲೆ ಕೊಡದಿದ್ದರೆ ಸರ್ಕಾರದ ಎಫ್‍ಡಿ ಖಾತೆಯನ್ನು ವಾಪಸ್ ಪಡೆಯುವ ಪರಿಸ್ಥಿತಿ ಬರುತ್ತದೆ ಉಷಾರ್ ಎಂದು ಹೇಳಿದ್ದಾರೆ.