ನವದೆಹಲಿ : ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸಂಬಂಧಿಸಿದಂತೆ ರೈತ ಸಮುದಾಯಕ್ಕೆ ಮಹತ್ವದ ಮಾಹಿತಿ ನೀಡಿದೆ.

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಖಾತೆ ಹೊಂದಿರುವ ರೈತರು ಹಣ ವರ್ಗಾವಣೆಯಾಗಿಲ್ಲವೆಂದರೆ ಅದರ ಬಗ್ಗೆ ತಿಳಿದುಕೊಳ್ಳಲು ಕೇಂದ್ರ ಸರ್ಕಾರವು ಹೊಸ ಮಾರ್ಗವನ್ನು ಜಾರಿಗೆ ತಂದಿದೆ.

ಕಿಸಾನ್ ಸಮ್ಮಾನ್ ನಿಧಿಯಲ್ಲಿ ಖಾತೆ ಹೊಂದಿರುವ ರೈತರು ಪಿಎಂ ಕಿಸಾನ್ ಕ್ರೆಡಿಟ್ ಪೋರ್ಟಲ್ ಗೆ ಹೋಗಿ, ಅಲ್ಲಿ ಆಧಾರ್, ಮೊಬೈಲ್, ಬ್ಯಾಂಕ್ ಖಾತೆ ನಂಬರ್ ನೋಂದಾಯಿಸಿ ಮಾಹಿತಿ ಪಡೆಯಬಹುದು. ಈ ಯೋಜನೆಗೆ ಹೆಸರು ನೋಂದಾಯಿಸಲು ರೈತರು ಅಧಿಕಾರಿಗಳ ಬಳಿ ಹೋಗಬೇಕಾಗಿಲ್ಲ. ಕಿಸಾನ್ ಪೋರ್ಟಲ್ ಗೆ ಹೋಗಿ ಹೆಸರು ನೋಂದಾಯಿಸಬಹುದು.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಪ್ರತಿ ವರ್ಷ 6 ಸಾವಿರ ರೂ. ಪಡೆಯುತ್ತಿರುವ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.