ನವದೆಹಲಿ : ಕೇಂದ್ರ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಭತ್ತ ಸೇರಿದಂತೆ 14 ಬೆಳೆಗಳ ಬೆಂಬಲ ಬೆಲೆಯನ್ನು ಏರಿಕೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಭತ್ತ ಸೇರಿದಂತೆ 14 ಬೆಳೆಗಳ ಬೆಂಬಲ ಬೆಲೆಯನ್ನು ಏರಿಕೆ ಮಾಡಲಾಗಿದ್ದು, ಭತ್ತದ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್ ಗೆ 53 ರೂ. ಏರಿಕೆ ಮಾಡಿದ್ದು, 2020-21 ನೇ ಸಾಲಿನಲ್ಲಿ ಕ್ವಿಂಟಲ್ ಗೆ 1868 ರೂ. ಬೆಂಬಲ ಬೆಲೆ ಸಿಗಲಿದೆ.

ಪ್ರತಿ ಕ್ವಿಂಟಾಲ್ ಭತ್ತಕ್ಕೆ 53 ರೂ. ಏರಿಕೆ ಮಾಡಿದರೆ ಸಜ್ಜೆ- 640 ರೂ, ರಾಗಿ 145 ರೂ, ಮೆಕ್ಕೆಜೋಳ-90 ರೂ, ಜೋಳ-70 ರೂ, ಉದ್ದು 300 ರೂ, ತೊಗರಿಬೇಳೆಗೆ 200 ರೂ, ಹೆಸರು ಬೆಳೆಗೆ 146 ರೂ, ಸೋಯಾಬಿನ್ ಗೆ 170 ರೂ. ಸೂರ್ಯಕಾಂತಿ 235 ರೂ. ಶೇಂಗಾ 185 ರೂ. ಹೆಚ್ಚೆಳ್ಳು 755 ರೂ. ಎಳ್ಳು 370 ರೂ. ವರೆಗೆ ಏರಿಕೆ ಮಾಡಲಾಗಿದೆ.