ಚಿತ್ರದುರ್ಗ: ರೇಷ್ಮೆ ಸೀರೆ ನಮ್ಮ ಸಂಸ್ಕøತಿ ಪರಂಪರೆಯ ಸಂಕೇತವಾಗಿದ್ದು, ಇವುಗಳನ್ನು ಖರೀದಿ ಮಾಡುವುದರ ಮೂಲಕ ಇದರ ಹಿಂದೆ ಇರುವವರಿಗೆ ಉತ್ತೇಜನ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ತಿಳಿಸಿದರು.

ನಗರದ ವೈದ್ಯಕೀಯ ಸಭಾಂಗಣದಲ್ಲಿ ಕೆ.ಎಸ್.ಐ.ಸಿ.ವತಿಯಿಂದ ಹಮ್ಮಿಕೊಂಡಿರುವ ಕರ್ನಾಟಕದ ಪಾರಂಪಾರಿಕ ಉತ್ಪನ್ನವಾದ ಮೈಸೂರು ಸಿಲ್ಕ್‍ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿ ಮಾತನಾಡಿ ಮೈಸೂರು ಸಿಲ್ಕ್ ಕರ್ನಾಟಕ ಸರ್ಕಾರದ ಒಂದು ಉದ್ಯಮವಾಗಿದ್ದು, ತನ್ನದೆ ಆದ ಇತಿಹಾಸವನ್ನು ಹೊಂದಿದೆ, ಮಹಾರಾಜರ ಕಾಲದಿಂದಲೂ ಸಹಾ ರೇಷ್ಟೆಯನ್ನು ಧರಿಸುವ ಹವ್ಯಾಸ ಇದ್ದು, ಇದು ಇಂದಿಗೂ ಸಹಾ ಮುಂದುವರೆದಿದೆ. ಕರ್ನಾಟಕ ಪರಂಪರೆಯಾಗಿ ರೇಷ್ಮೆ ವಸ್ತ್ರಗಳು ಇತಿಹಾಸವನ್ನು ಹೊಂದಿದೆ, ಇದರಲ್ಲಿ ವಿವಿಧ ರೀತಿಯ ಬಣ್ಣ, ಡಿಜೈನ್ ಇದ್ದ ಆಯ್ಕೆಯನ್ನು ಮಾಡಬಹುದಾಗಿದೆ, ಇಲ್ಲಿ ಸೀರೆಯ ಬೆಲೆ ಜಾಸ್ತಿ ಎಂದು ಹೇಳುತ್ತಾರೆ ಆದರೆ ಇದನ್ನು ತಯಾರು ಮಾಡುವ ಕುಶಲಗಾರಿಕೆಯನ್ನು ಹೊಂದಿರುವವರಿಗೆ ಇದರ ಪ್ರತಿಫಲ ಸಿಗಬೇಕಿದೆ ಇದರಿಂದ ದರ ಹೆಚ್ಚಾದರೂ ಸಹಾ ಖರೀದಿ ಮಾಡುವಂತೆ ಮನವಿ ಮಾಡಿದರು.

ಸೀರೆ ನಮ್ಮ ಸಂಸ್ಕøತಿಯ ಪ್ರತೀಕ. ಮೈಸೂರು ಸಿಲ್ಕ್ ಸೀರೆಯು ನಮ್ಮ ನಾಡಿನ ಹೆಮ್ಮೆಯ ಹೆಗ್ಗುರುತು. ಹಾಗಾಗಿ ಮೈಸೂರು ಸಿಲ್ಕ್ ಸೀರೆ ಖರೀದಿಸುವ ಮೂಲಕ ಜನರು ರೇಷ್ಮೆ ಉದ್ಯಮಕ್ಕೆ ಉತ್ತೇಜನ ನೀಡಬೇಕಿದೆ. ಸೀರೆ ಎಲ್ಲ ಮಹಿಳೆಯರಿಗೆ ಅಚ್ಚುಮೆಚ್ಚು. ಎಷ್ಟೇ ಸೀರೆಗಳು ತಮ್ಮ ಬಳಿ ಇದ್ದರೂ ಮತ್ತೆ ಮತ್ತೆ ಖರೀದಿಸುತ್ತಾರೆ. ಮೈಸೈರು ಸಿಲ್ಕ್ ಸೀರೆ ಖರೀದಿಸಿದಲ್ಲಿ ರೇಷ್ಮೆ ಬೆಳೆಯುವ ರೈತರು ಸೇರಿದಂತೆ ಉದ್ಯಮದಲ್ಲಿ ಕೆಲಸ ಮಾಡುವ ಎಲ್ಲ ಕೆಲಸಗಾರರನ್ನು ಬೆಂಬಲಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅತಿ ಹೆಚ್ಚು ಉದ್ಯೋವಾಗಕಾಶ ಒದಗಿಸುವ ಕ್ಷೇತ್ರಗಳಲ್ಲಿ ಕೃಷಿ ಕ್ಷೇತ್ರ ಮೊದಲು. ನಂತರದ ಸ್ಥಾನ ರೇಷ್ಮೆ ಉದ್ಯಮದ್ದು, ಇಲ್ಲಿ ರೇಷ್ಮೆ ಬೆಳೆಯುವುದು, ಅದನ್ನು ಬೇಯಿಸುವುದು, ಎಳೆ ತೆಗೆಯುವುದು, ನಂತರ ಅದರಿಂದ ಬಟ್ಟೆ ನೇಯುವುದು ಸೇರಿದಂತೆ ಸಾಕಷ್ಟು ಜನರಿಗೆ ಉದ್ಯೋಗ ದೊರೆಯುತ್ತದೆ. ಇದರಿಂದ ಹೆಚ್ಚಿನ ಜನರು ಬದುಕು ಕಟ್ಟಿಕೊಳ್ಳಬಹುದು. ಇಂತಹ ಕ್ಷೇತ್ರವನ್ನು ಬೆಂಬಲಿಸುವುದು ಪ್ರತಿಯೊಬ್ಬರ ಜವಾಬ್ಧಾರಿ. ಪ್ರತಿ ಸೀರೆ ಖರೀದಿಯಲ್ಲಿ ಶೇಕಡಾ 25 ರಷ್ಟು ಡಿಸ್‍ಕೌಂಟ್ ಇದೆ. ಸರ್ಕಾರಿ ನೌಕರರು ಕಂತಿನ ಮೇಲೆ ಹಣ ಪಾವತಿಸಬಹುದು ಎಂದರು.