ಬೆಂಗಳೂರು: ಆಯಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ರಾತ್ರಿ ಇಡೀ ಗಣಿ ಧಣಿ ಜನಾರ್ದನ ರೆಡ್ಡಿ ಅವರ ವಿಚಾರಣೆ ನಡೆಸಿದ್ದಾರೆ. ಸಿಸಿಬಿ ಯವರು ರೆಡ್ಡಿಯವರಿಗೆ ಯಾವ ಯಾವ ಪ್ರಶ್ನೆಗಳನ್ನು ಕೇಳಿದ್ದಾರೆ.?

  • ನಿಮಗೆ ಆಯಂಬಿಡೆಂಟ್ ಕಂಪನಿ ಗೊತ್ತಿದೆಯಾ..?
  • ನಿಮಗೂ ಫರೀದ್‌ಗೂ ಯಾವ ರೀತಿಯ ಸಂಬಂಧ ಇದೆ..!?
  • ನೀವು ತಾಜ್ ವೆಸ್ಟ್ ಹೋಟೆಲ್‌ನಲ್ಲಿ ಇದ್ದದ್ದು ನಿಜನಾ?
  • ಹಾಗಾದ್ರೆ ನಿಮ್ಮ ಜೊತೆ ಯಾರ‌್ಯಾರು ಇದ್ದರು?
  • ಹೋಟೆಲ್‌ಗೆ ಹೋಗಿದ್ದರೆ ಯಾವ ವಿಷಯದ ಮೇಲೆ ಅಲ್ಲಿಗೆ ತೆರಳಿದ್ರಿ..!?
  • ಫರೀದ್ ಪಂಚನಾಮೆಯಲ್ಲಿ ಕೊಟ್ಟಿರುವ ಸ್ಟೇಟ್ ಮೆಂಟ್ ನಿಜನಾ..!?
  • ಹೋಟೆಲ್‌ನಲ್ಲಿ ನೀವು ನಡೆಸಿದ ಮಾತುಕತೆ ನಿಜನಾ..!?
  • ನಿಮಗೆ ಇಡಿ ಅಧಿಕಾರಿಗಳ ಪರಿಚಯ ಇದೆಯಾ..!?
  • ಪರಿಚಯ ಇದ್ದರೆ ಆ ಅಧಿಕಾರಿ ಯಾರು..!?
  • ಆಯಂಬಿಡೆಂಟ್ ಕಂಪನಿ ಬಗ್ಗೆ ಸಂಪೂರ್ಣ ಮಾಹಿತಿ ಇದೆಯಾ..!?
  • ಫರೀದ್ ಎಷ್ಟು ವರ್ಷದಿಂದ ನಿಮಗೆ ಪರಿಚಯ..!?
  • ಆಲಿಖಾನ್‌ಗೂ ಫರೀದ್‌ಗೂ ಪರಿಚಯ ಇರುವುದರ ಬಗ್ಗೆ ನಿಮಗೆ ಮಾಹಿತಿ ಇತ್ತಾ..!?
  • ಆಲಿಖಾನ್ ನಡೆಸುವ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ಇದೆಯಾ..!?
  • ಆಯಂಬಿಡೆಂಟ್‌ ಪ್ರಕರಣದಲ್ಲಿ ಫರೀದ್‌ನನ್ನು ನೀವು ಬಚಾವ್ ಮಾಡಿದ್ದು ನಿಜನಾ..!?
  • ಕೋಟಿ ಕೋಟಿ ಹಣವನ್ನು ನೀವು ಡೀಲಿಂಗ್ ಮಾಡಿದ್ದು ನಿಜನಾ..!?
  • ಚಿನ್ನದ ವ್ಯಾಪಾರಿ ರಮೇಶ್ ಮೂಲಕ ಹಣ ಟ್ರಾನ್ಸ್‌ಫರ್ ಮಾಡು ಎಂದಿದ್ದು ಸತ್ಯನಾ..?
  • ರಮೇಶ್‌ಗೂ ನಿಮಗೂ ಯಾವ ರೀತಿಯ ಸಂಬಂಧ ಇದೆ.!?
  • ಜಾರಿ ನಿರ್ದೇಶನಾಲಯದ ಕೇಸ್ ಮುಚ್ಚಿ ಹಾಕುವ ಬಗ್ಗೆ ಮಾತನಾಡಿದ್ದು ನಿಜವೇ..?
  • ಈ ಡೀಲ್‌ನಲ್ಲಿ ನೀವು ಮೊದಲಿಗೆ ಎರಡು ಕೋಟಿ ತೆಗೆದುಕೊಂಡ್ರಾ..!?
  • ಈ ಪ್ರಕರಣದಲ್ಲಿ ಕೇಳಿಬಂದಿರುವ 57 ಕೆಜಿ ಚಿನ್ನದ ಗಟ್ಟಿ ವಿಚಾರ ಏನು..!?
  • 57 ಕೆಜಿ ಚಿನ್ನದ ಗಟ್ಟಿ ವಿಚಾರ ಯಾಕೆ ಬಂತು..?
  • ಚಿನ್ನವನ್ನ ಹೇಗೆ ಹಸ್ತಾತಂರ ಮಾಡಿಕೊಂಡ್ರಿ..?
  • ಬ್ರಿಜೇಶ್ ರೆಡ್ಡಿ ಹಾಗೂ ರಮೇಶ್ ನಿಮಗೆ ಹೇಗೆ ಪರಿಚಯ..?
  • ನಿಮ್ಮ ವ್ಯವಹಾರದಲ್ಲಿ ಬ್ರಿಜೇಶ್ ರೆಡ್ಡಿ ಪಾತ್ರ ಏನಿದೆ..?
  • ಸದ್ಯಕ್ಕೆ 57 ಕೆಜಿ ಚಿನ್ನವನ್ನು ಎಲ್ಲಿ ಅಡಗಿಸಿ ಇಟ್ಟಿದ್ದೀರಿ..?
  • ಮೊದಲಿಗೆ ನಿಮ್ಮನ್ನು ಭೇಟಿ ಮಾಡಿದ್ದ ಫರೀದ್ ನಿಮ್ಮ ಬಳಿ ಏನು ಹೇಳಿದ್ದ..?
  • ಫರೀದ್‌ಗೆ ನೀವು ಯಾವ ರೀತಿಯ ಆಫರ್ ಕೊಟ್ಟಿದ್ರಿ..?
  • ನಿಮಗೂ ಫರೀದ್‌ಗೂ ಲಿಂಕ್ ಬೆಳಿಸಿದ್ದು ಯಾರು..?
  • ಆಲಿಖಾನ್ ಬಳಿ ಸಿಕ್ಕಿರುವ ಜೀವಂತ ಗುಂಡಿನ ಬಗ್ಗೆ ನಿಮಗೇನಾದರು ಗೊತ್ತಾ..?
  • ಆಂಬಿಡೆಂಟ್ ಕಂಪನಿ ಜೊತೆಗೆ ಸದ್ಯಕ್ಕೆ ನೀವು ರೀತಿ ಲಿಂಕ್ ಇಟ್ಟುಕೊಂಡಿದ್ದೀರಾ..?

ಅಂತ ಕೇಳಿದ ಪ್ರಶ್ನೆಗಳಿಗೆ ರೆಡ್ಡಿಗಾರು ಸಮಾಧಾನದಿಂದ ಉತ್ತರ ನೀಡಿದ್ದಾರೆಂಬುದು ಸುದ್ದಿ. ಆದರೂ ಸಿಸಿಬಿಯವರು ಮತ್ತೆ ಅವರನ್ನು ವಿಚಾರಣೆ ನಡೆಸಲಿದ್ದಾರೆ.