ಹಾಸನ : ಮುಖ್ಯ ಮಂತ್ರಿ ಆಗಿ ಯಡಿಯೂರಪ್ಪನವರು ಬಂದಾಗ ನಾನು ದ್ವೇಷದ ರಾಜಕೀಯ ಮಾಡೊದಿಲ್ಲಾ ಎಂದು ಹೇಳಿದ್ರು  ಈಗ ಅವರು ದ್ವೇಷದ‌ ಆಡಳಿತ ನಡೆಸುತ್ತಿದ್ದಾರೆ. ಎಷ್ಟು ದಿನ‌ ಮಾಡುತ್ತಾರೆ ಮಾಡ್ಲಿ ಅವರನ್ನು ರಿಪೇರಿ ಹೇಗೆ ಮಾಡೋದು ನನಗೆ ಗೊತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಬಿಟ್ರು.!

ನಗರದ ಹಾಸನ‌ ಹಾಲು ಒಕ್ಕೂಟದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2018-19 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕೀಯ ನನಗೆ ಹೊಸದೇನಲ್ಲಾ ಯಡಿಯೂರಪ್ಪ ಅಂತವರಿಗೆ ಹೆದರಿ‌ ರಾಜಕೀಯ ಬಿಟ್ಟು ಹೋಗಲ್ಲ. ಇಂತಹ ಯಡಿಯೂರಪ್ಪರನ್ನು ಎಷ್ಟು ಮಂದಿಯನ್ನು ನೋಡಿದ್ದೀನಿ ಎಂದರು.