ಚಿತ್ರದುರ್ಗ: ಜಿಲ್ಲೆಯಲ್ಲಿ ಹಲವಾರು ನಾಯಕರುಗಳು ಅಂದ್ರೆ ಬಿಜೆಪಿಯಿಂದ ಹಿಡಿದು ಮಾಜಿ ಮಂತ್ರಿ ಆಂಜನೇಯರು ಸೇರಿದಂತೆ ಗ್ರಾಮ ವಾಸ್ತವ್ಯ ಮಾಡಿದ್ದು ಮಾಧ್ಯಮಗಳಲ್ಲಿ ಸುದ್ದಿ ಹೈಪ್ ಆಗಿತ್ತು.

ಇವರು ಮಲಗುವಾಗಲು ಈಡಿ ಜಿಲ್ಲಾಯಂತ್ರಾಂಗವನ್ನು ಬಳಸಿದ್ದರು ಆದ್ರೆ ಮಾಜಿ ಮಂತ್ರಿ ಹಾಲಿ ಮೊಳಕಾಲ್ಮೂರು ಶಾಸಕ ಶ್ರೀ ರಾಮುಲು ಗ್ರಾಮ ವಾಸ್ತವ್ಯವೇ ಬೇರೆ ಮತ್ತು ಮಾದರಿ ಎಂಬುದು ವೈರಲ್.

ಬಿಜೆಪಿ ನಾಯಕ ಶ್ರೀರಾಮುಲು ನಿನ್ನೆ ರಾತ್ರಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಶ್ರೀರಾಮುಲು, ತಮ್ಮದೇ ಕ್ಷೇತ್ರದ ನೆಲಗೇತಲಹಟ್ಟಿ ಗ್ರಾಮದ ದಲಿತ ಕುಟುಂಬದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರ ಮನೆಯಲ್ಲಿ ಮಾಡಿದ ರಾಗಿ ರೊಟ್ಟಿ ಚೆಟ್ನಿ ಅನ್ನ ಸಾಂಬಾರು ತಿಂದು ಮಲಗಿರುವುದು ಒಂದು ಮಾದರಿ.