ಬೆಂಗಳೂರು : ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಆದರ್ಶ ವಿದ್ಯಾಲಯಗಳ ಶಿಕ್ಷಕರ ವೇತನವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಆದರ್ಶ ವಿದ್ಯಾಲಯಗಳ ಶಿಕ್ಷಕರ ವೇತನ ಪಾವತಿಗೆ ರಾಜ್ಯ ಸರ್ಕಾರ 4 ನೇ ತ್ರೈಮಾಸಿಕ ಕಂತಿನಲ್ಲಿ 370.47 ಕೋಟಿ ರೂ. ಬಿಡುಗಡೆ ಮಾಡಿದೆ. ಶಿಕ್ಷಕರಿಗೆ ವೇತನ ನೀಡಿ, ವಿವರಗಳನ್ನು ಡಿಜಿಟಲ್ ಸಪೋರ್ಟ್ ಸಿಸ್ಟಂಗೆ ಅಪ್ ಲೋಡ್ ಮಾಡಲು ಜಿಲ್ಲಾ ಉಪನಿರ್ದೇಶಕರಿಗೆ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಸೂಚಿಸಿದ್ದಾರೆ.