ಉತ್ತರ ಪ್ರದೇಶ: ಅಯೋಧ್ಯೆ ರಾಮಮಂದಿರ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಪ್ರಧಾನಿ ಮೋದಿ ಪ್ರಸಿದ್ಧ ಹನುಮಾನ್ ಗರ್ಹಿ ದೇವಾಲಯಕ್ಕೆ ಹೋಗಲಿದ್ದಾರೆ.

ರಾಮಮಂದಿರಕ್ಕೆ ಭೇಟಿ ನೀಡುವ ಮೊದಲು ಹನುಮಾನ್ ಮಂದಿರದಲ್ಲಿ ಪೂಜೆ ಸಲ್ಲಿಸಬೇಕು ಎಂಬ ನಂಬಿಕೆ ಇದೆ. ಇನ್ನು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ನಿಮಿತ್ತ ಅಯೋಧ್ಯೆ ನಗರದಾದ್ಯಂತ ಸಂಭ್ರಮದ ವಾತಾವರಣ ಮನೆ ಮಾಡಿದೆ. ಗೋಡೆಗಳಿಗೆ ಹಳದಿ ಬಣ್ಣ, ಬೆಳಕಿನ ದೀಪಾಲಂಕಾರಗಳಿಂದ ನಗರ ಸಿಂಗಾರಗೊಂಡಿದೆ.!