ಬಳ್ಳಾರಿ : ತಮ್ಮದೇ ಸರ್ಕಾರ ಇರೋ ಬಗ್ಗೆ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅವರು ಬಳ್ಳಾರಿಯ ಹೊಸಪೇಟೆ ತಾಲೂಕಿನ ಕಮಾಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದಲ್ಲಿ ನಡೆದ 66ನೇ ವನ್ಯ ಜೀವಿ ಸಂರಕ್ಷಣಾ ಸಪ್ತಾಹದ ಅಂಗವಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಈ ಬಗ್ಗೆ ನುಡಿದರು.
ಇದೇ ವೇಳೆ ಅವರು ತಮ್ಮ ಮಾತಿಗೆ ಇನ್ನೊಂದು ಅರ್ಥವನ್ನು ನೀಡದಂತೆ ಮಾಧ್ಯಮವದರಿಗೆ ಮನವಿ ಮಾಡಕೊಂಡರು.