ಬೆಂಗಳೂರು: ರಾಜ್ಯ ಸರ್ಕಾರವು ತನ್ನ ಎಲ್ಲಾ ಇಲಾಖೆಗಳ ನೌಕರರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಗಳಿಕೆ ರಜೆಗೆ ಕತ್ತರಿ ಹಾಕಿದ್ದ ಸರ್ಕಾರ, ಕೇವಲ ಅರ್ಧ ಗಂಟೆಯಲ್ಲಿ ಮತ್ತೊಂದು ಆದೇಶ ಹೊರಡಿಸಿದೆ.

ರಾಜ್ಯದ ಎಲ್ಲಾ ಸರ್ಕಾರಿ ನೌಕರರು 2020ರ ಜೂನ್ ತಿಂಗಳಿನಿಂದ ಅನ್ವಯವಾಗುವಂತೆ ಮುಂದಿನ 2021ರ ಜೂನ್ ವರೆಗೆ ಪಡೆಯಲಿದ್ದ ತುಟ್ಟಿ ಭತ್ಯೆಗೆ ತಡೆ ನೀಡಿದೆ. ಕೇಂದ್ರ ಸರ್ಕಾರವೂ ಕೂಡ ಈ ಹಿಂದೆ ಇದೇ ರೀತಿಯ ತೀರ್ಮಾನ ಕೈಗೊಂಡಿತ್ತು.

ಈ ಹಿಂದೆ ಎಲ್ಲಾ ನೌಕರರಿಗೂ ಗಳಿಕೆ ರಜೆ ನೀಡಲಾಗುತ್ತಿತ್ತು. ರಜೆ ಬೇಡ ಎಂದಾದಲ್ಲಿ ರಜೆ ಬದಲು ದಿನದ ಗಳಿಕೆ ಆಧಾರದಲ್ಲಿ ಹಣ ಪಡೆಯಬಹುದಿತ್ತು. ಆದರೆ ಈ ಅವಕಾಶವನ್ನು ಸರ್ಕಾರ ರದ್ದು ಮಾಡಿದೆ. ಇನ್ನುಮುಂದೆ ಯಾವೊಬ್ಬ ನೌಕರನೂ ಈ ಗಳಿಕೆ ರಜೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಕೊರೋನಾ ಸೋಂಕಿನ ಭೀತಿ ಹಿನ್ನೆಲೆ ಲಾಕ್ ಡೌನ್ ಹೇರಲಾಗಿ ಸರ್ಕಾರವು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.