ಬೆಂಗಳೂರು: ಐಟಿ-ಬಿಟಿ ಉದ್ಯೋಗಿಗಳು ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿರುವಂತೆ ರಾಜ್ಯದಲ್ಲಿಯೂ ರಾಜ್ಯ ಸರ್ಕಾರಿ ನೌಕರರಿಗೂ ವಾರದಲ್ಲಿ ಐದು ದಿನ ಕೆಲಸ ಎರಡು ರಜಾ ದಿನ ಪದ್ದತಿ ಜಾರಿಗೆ ಬರಲಿದೆಯಂತೆ.!

6 ನೇ ವೇತನ ಆಯೋಗಕ್ಕೆ ಸರ್ಕಾರಿ ನೌಕರರ ಸಂಘ ಮನವಿ ಮಾಡಿದ್ದು, 5 ದಿನ ಕೆಲಸ ಹಾಗೂ 2 ದಿನ ರಜಾ ಜಾರಿ ಕುರಿತಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಸಾಧಕ-ಭಾದಕಗಳ ಬಗ್ಗೆ ಅಯೋಗ ಅಧ್ಯಯನ ನಡೆಸುತ್ತಿದೆ. ಇನ್ನು ವೇತನ ಆಯೋಗವು ಮನವಿ ಹಿನ್ನೆಲೆಯಲ್ಲಿ ರಜೆ ಪರಿಷ್ಕರಣೆ ಮೇಲೆಯೂ ತನ್ನ ಗಮನ ಹರಿಸಿದೆ.

ವಾರದಲ್ಲಿ ಎರಡು ದಿನ ರಜಾ ನೀಡುವ ಪದ್ದತಿಗೆ ಸರ್ಕಾರ ಹಸಿರು ನಿಶಾನೆ ತೋರಿಸಿದ್ದಲ್ಲಿ ಸರ್ಕಾರಿ ನೌಕರರು ಸಹ ವಾರದಲ್ಲಿ ಎರಡು ದಿನ ರಜಾ ಪಡೆಯಬಹುದು ಎಂಬುದು ಖುಷಿ ವಿಚಾರ ಅಲ್ಲವೆ. ಆಲ್ಲಿಯವರೆಗೆ ಕಾಯಬೇಕು ಅಷ್ಟೆ.!