ಹುಬ್ಬಳ್ಳಿ : ನ್ಯಾ. ನಾಹಮೋಹನ್ ದಾಸ್ ವರದಿಯನ್ನು ಸಂಪುಟದಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಕಳುಹಿಸಿಲಾಗುತ್ತದೆ ಎಂದು ಹೇಳಿದ ಬೆನ್ನಲ್ಲೆ  ರಾಜ್ಯ ಸರ್ಕಾರದ ವಿರುದ್ಧ ಧರ್ಮ ಯುದ್ಧ ನಾವು ನಿಶ್ಚಿತ ಅಂತ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

 ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಆರೋಪಿಸಿದರು.

ಸಿದ್ದರಾಮಯ್ಯ ಅವರಿಗೆ ಈಗ ಅಧಿಕಾರ ಇದೆ, ಬೇಕೆನಿಸಿದ್ದನ್ನು ಮಾಡಲಿ. ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದರು. ತಜ್ಞರ ಸಮಿತಿಯ ಮಾತು ಕೇಳಿಕೊಂಡು ಮುಖ್ಯಮಂತ್ರಿಗಳು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ರಂಭಾಪುರಿ ಶ್ರೀಗಳು ಆರೋಪಿಸಿದರು.

ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ. ನ್ಯಾ.ನಾಗಮೋಹನದಾಸರಿಗೆ ಇತಿಹಾಸ ವೀರಶೈವದ ಬಗ್ಗೆ ಗೊತ್ತಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಈ ವರದಿಯನ್ನು ತಿರಸ್ಕರಿಸಬೇಕು. ಲಿಂಗಾಯತ ಮತ್ತು ವೀರಶೈವದ ಎರಡೂ ಬಣದ ಮೂರು ಮೂರು ಜನರನ್ನು ಸೇರಿಸಿ ಒಂದು ಸಮಿತಿ ರಚನೆ ಮಾಡಲಿ.

ಸಮಿತಿಯಿಂದ ವರದಿ ಪಡೆದು, ನಂತರ ನಿರ್ಣಯ ಕೈಗೊಳ್ಳಲಿ. ಧರ್ಮ ಒಡೆಯುಲು ತೋರಿಸಿದಷ್ಟು ಇಚ್ಛಾಶಕ್ತಿಯನ್ನು ಮಹದಾಯಿಗೆ ತೋರಲಿ. ಮುಖ್ಯಮಂತ್ರಿಗಳು ಧರ್ಮ ಒಡೆಯಲು ಕೆಲವರಿಗೆ ಪ್ರೋತ್ಸಾಹ ನೀಡಿದ್ದಾರೆ ಮುಖ್ಯಮಂತ್ರಿಗಳ ನಡೆ ಸರಿಯಲ್ಲ ಎಂದು ಹೇಳಿದ್ದಾರೆ..