ಬೆಂಗಳೂರು: ರಾಜ್ಯ ಸರಕಾರ ರೇಷ್ಮೆ ಗೂಡುಗಳಿಗೆ ಪ್ರತಿ ಕೆಜಿಗೆ 50 ರೂ. ಬೆಂಬಲ ಬೆಲೆ ನೀಡುವುದಾಗಿ ಘೋಷಣೆ ಮಾಡಿದೆ.

ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ಗೂ ಮೊದಲು ರೇಷ್ಮೆ ಗೂಡುಗಳ ಬೆಲೆ ಪ್ರತಿ ಕೆಜಿಗೆ 350 ರೂ. ಗಳಿಂದ 500 ರೂ. ಗಳಷ್ಟಿತ್ತು, ಇದೀಗ ಕಿಲೋಗೆ 270 ರೂ.ಗಳಿಂದ 250 ರೂ. ಗಳಿಗೆ ಇಳಿದಿದೆ.

ಹಾಗಾಗಿ ಪ್ರತಿ ಕೆಜಿಗೆ 50 ರೂ. ಬೆಂಬಲ ಬೆಲೆ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಇನ್ನು ಈ ಬೆಂಬಲ ಬೆಲೆ 2020 ರ ಏಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆಯಂತೆ.!