ರಾಜ್ಯ ಸರಕಾರ ಕೊರೋನಾ ಅಪ್ ಡೇಟ್ ಸುರೇಶ್ ಕುಮಾರ್ ಹೆಗಲಿಗೆ.!

ಬೆಂಗಳೂರು : ಈಗಾಗಲೇ ಕೊರೊನಾ ವೈರಸ್ ಸೋಂಕು ನಿಯಂತ್ರಣ ಸಂಬಂಧ ಇದ್ದಂತ ಗೊಂದಲವನ್ನು ನಿವಾರಿಸಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವ ಡಾ.ಸುಧಾಕರ್ ಮತ್ತು ಶ್ರೀರಾಮುಲು ಅವರಿಗೆ ಬೆಂಗಳೂರು ಜವಾಬ್ದಾರಿ, ರಾಜ್ಯದ ಜವಾಬ್ದಾರಿ ವಹಿಸಲಾಗಿತ್ತು. ಈ ಬಳಿಕ ಕೊರೊನಾ ಅಪ್ ಡೇಟ್ ಜವಾಬ್ದಾರಿಯನ್ನು ಇದೀಗ ಸಚಿವ ಸುರೇಶ್ ಕುಮಾರ್ ಹೆಗಲಿಗೆ ವಹಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಕೊರೊನಾ ವೈರಸ್ ಸೋಂಕಿನ ಅಂಕೆ-ಸಂಖ್ಯೆಯಲ್ಲಿ ಕೆಲವೊಂದು ವೇಳೆ ಗೊಂದಲ ಏರ್ಪಡುತ್ತಿತ್ತು. ಇದನ್ನು ತಪ್ಪಿಸುವ ಸಲುವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕೊರೊನಾ ಅಪ್ ಡೇಟ್ ಹೊಣೆಗಾರಿಕೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೆಗಲಿಗೆ ವಹಿಸಿದ್ದಾರೆ.

ಈ ಕುರಿತಂತೆ ಸಚಿವ ಸುರೇಶ್ ಕುಮಾರ್ ಗೆ ಸೂಚಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೊರೋನಾ ವೈರಸ್ ಅಪ್ ಡೇಟ್ ನಲ್ಲಿ ಯಾವುದೇ ಗೊಂದಲ ಬೇಡ. ಇಂತಹ ಗೊಂದಲ ನಿವಾರಿಸುವ ಸಲುವಾಗಿ, ಸಚಿವ ಸುರೇಶ್ ಕುಮಾರ್ ಅವರಿಗೆ ಕೊರೊನಾ ಅಪ್ ಡೇಟ್ ಜವಾಬ್ದಾರಿಯನ್ನು ವಹಿಸಲಾಗಿದೆ. ಕೊರೊನಾ ಸೋಂಕಿನ ಸಂಬಂಧಿಸಿದ ಹೆಲ್ತ್ ಬುಲೆಟಿನ್ ಅವರೇ ನಿಬಾಹಿಸಿ, ಮಾಹಿತಿ ನೀಡಲಾಗಿದ್ದಾರೆ ಎಂಬುದಾಗಿ ತಿಳಿಸಿದರು.