ಬೆಂಗಳೂರು: ದೋಸ್ತಿ ಸರಕಾರ ಈಬಾರಿ ಸರಕಾರಿ ನೌಕರರಿಗೆ ದಸರಹಬ್ಬದ ಗಿಫ್ಟ್ ನೀಡಿದ್ದಾರೆ.ಆರನೇ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರಕಾರಿ ನೌಕರರ ತುಟ್ಟಿ ಭ್ಯತೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.

ಇದರಿಂದ ರಾಜ್ಯದ ಆರು ಲಕ್ಷ ನೌಕರರ ಮೂಲ ವೇತನದಲ್ಲಿ ಶೇಕಡ 1.75ರಷ್ಟು ಹೆಚ್ಚಳ ತುಟ್ಟಿ ಭತ್ಯೆ ಹೆಚ್ಚಿಗೆ ನೀಡಲಾಗುತ್ತಿದೆ. ಇದನ್ನು ಶೇ. 3.75 ಕ್ಕೆ ಹೆಚ್ಚಿಸಲಾಗಿದೆ.ಪರಿಷ್ಕೃತ ತುಟ್ಟಿ ಭತ್ಯೆ ಜುಲೈ ಒಂದರಿಂದ ಜಾರಿಗೆ ಬರಲಿದೆ.

ಹಣಕಾಸು ಉಸ್ತುವಾರಿ ವಹಿಸಿಕೊಂಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಅದರಂತೆ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಸರಕಾರ ಒಪ್ಪಿಕೊಂಡಿದೆ.