ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಸಿಹಿಸುದ್ದಿ ಕೊನೆಗೂ ಸಿಕ್ಕಿದೆ. ಮೂಲವೇತನದ ಶೇಕಡ 1.75 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಸೋಮವಾರ ಆದೇಶ ನೀಡಲಾಗಿದೆ.

ಆರನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ನೌಕರರ ವೇತನ ಪರಿಷ್ಕರಿಸಿದಾಗ 42.25 ರಷ್ಟಿದ್ದ ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸಲಾಗಿತ್ತು. ಇದರಿಂದಾಗಿ ನೌಕರರಿಗೆ ತುಟ್ಟಿಭತ್ಯೆ ಶೂನ್ಯವಾಗಿತ್ತು.

ಇದೀಗ ಜನವರಿ ಒಂದರಿಂದಲೇ ಪೂರ್ವಾನ್ವಯವಾಗುವಂತೆ ಶೇಕಡ 1.75 ರಷ್ಟು ತುಟ್ಟಿಭತ್ಯೆ ಮಂಜೂರಾಗಿದ್ದು, ಇದನ್ನು ನಗದು ರೂಪದಲ್ಲಿ ಪಾವತಿಸಲು ಆದೇಶಿಸಲಾಗಿದೆ. ಇದೆ ಅಲ್ಲವೆ  ಖುಷಿ ಸುದ್ದಿ.