ಬೆಂಗಳೂರು: ಕೇಂದ್ರ ಸರಕಾರದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದ ಹಿನ್ನಲೆ ಹಾಗೂ ಸಾಕಷ್ಟು ತೊಂದರೆಗಳು ಇರುವುದರಿಂದ, ರೈತರಿಗೆ ಅನುಕೂಲವಾಗಲು ರಾಜ್ಯ ಸರಕಾರ ಫಸಲ್ ಭೀಮಾ ಯೋಜನೆಯನ್ನ ಜಾರಿಗೆ ತರುವುದಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.

ಕೃಷಿ ಸಚಿವ ಶಿವಶಂಕರ‍ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರು ಈಗಾಗಲೇ ಇದೇ ತರದ ವಿಮಾಯೋಜನೆಯನ್ನು ಬಿಹಾರ ಸರಕಾರ ಜಾರಿಗೆ ತಂದಿದ್ದು, ಅಲ್ಲಿನ ಮಾದರಿಯನ್ನೇ ಇಲ್ಲೂ ಕೂಡ ಜಾರಿಗೆ ತರಲಿದೆ ಎನ್ನಲಾಗಿದ್ದು, ಈ ಬಗ್ಗೆ ಮೊದಲು ಅಲ್ಲಿ ಅಧ್ಯಯನ ನಡೆಸಿ, ಬಳಿಕ ಇದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.