ಬೆಂಗಳೂರು:  ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಹುತೇಕ ಪೂರ್ಣಗೊಂಡಿದ್ದು ಫಲಿತಾಂಶ ಹೊರಬುರುವುದಷ್ಟೆ ಬಾಕಿ.  ಬಿಜೆಪಿ 1 ಹಾಗೂ ಕಾಂಗ್ರೆಸ್ ಮೂರು ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದ್ದು, ಈ ಬಾರಿಯೂ ಜೆಡಿಎಸ್ ಫರಭಾವಗೊಳ್ಳಲಿದೆ.

ಒಟ್ಟು 225 ಸದಸ್ಯ ಬಲದ ವಿಧಾನಸಭೆಯಲ್ಲಿ 7 ಸ್ಥಾನ ಖಾಲಿ ಇದ್ದು 217 ಸದಸ್ಯರು ಮತದಾನದ ಹಕ್ಕು ಚಲಾಯಿಸಲು ಅವಕಾಶ ಪಡೆದಿದ್ದರು. ಅದರಲ್ಲಿ ಒಟ್ಟು 197 ಶಾಸಕರು ಮತದಾನ ಮಾಡಿದ್ದಾರೆ.

, ಬಿಜೆಪಿಯ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್‌ನ ಎಲ್. ಹನುಮಂತಯ್ಯ, ನಾಸೀರ್ ಹುಸೇನ್, ಬಿ.ಸಿ. ಚಂದ್ರಶೇಖರ್ ಆಯ್ಕೆ ಬಹುತೇಕ ಖಚಿತವಾಗಿದೆ. ಜೆಡಿಎಸ್ ಅಭ್ಯರ್ಥಿ ಫಾರೂಖ್‌ಗೆ ಸೋಲು ಖಾತರಿ ಆಗಿದೆ.