ಬೆಂಗಳೂರು : ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯ ಪೊಲೀಸ್ ಇಲಾಖೆಯ ಮೀಸಲು ಪೊಲೀಸ್ (KSRP) ಪಡೆಯಲ್ಲಿ 2,672 ಕಾನ್ ಸ್ಟೇಬಲ್ ಹಾಗೂ ವಿವಿಧ ಪಡೆಗಳಲ್ಲಿ 162 ಎಸ್ ಐ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ವಿಶೇಷ ಮೀಸಲು ಪೊಲೀಸ್ ಕಾನ್ ಸ್ಟೇಬಲ್ ಗಳ 2,420 ಹುದ್ದೆಗಳಿದ್ದು, 252 ಬ್ರ್ಯಾಂಡ್ ಮೆನ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಮೇ. 18 ರಿಂದ WWW.ksp.gov.in ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಬಹುದು.

ದಿನಾಂಕ 18-05-2020ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-06-2020 ಆಗಿರುತ್ತದೆ.

ಕೆಎಸ್ ಆರ್ ಪಿ ಹುದ್ದೆಗಳಿಗೆ ಸಂಬಂಧಿಸಿದಂತ ಇತರೆ ಮಾಹಿತಿ ಈ ಕೆಳಗಿನಂತಿದೆ.

ಒಟ್ಟು ಹುದ್ದೆಗಳ ಸಂಖ್ಯೆ – 2672

ವಿದ್ಯಾರ್ಹತೆ – ಎಸ್ ಎಸ್ ಎಲ್ ಸಿ ಅಥವಾ 10ನೇ ತರಗತಿ ಪಾಸ್ ಇಲ್ಲವೇ ತತ್ಸಮಾನ ವಿದ್ಯಾರ್ಹತೆ

ವಯೋಮಿತಿ – ಕನಿಷ್ಠ 18 ವರ್ಷ. ಸಾಮಾನ್ಯ ವರ್ಗದವರಿಗೆ 25 ವರ್ಷ. ಎಸ್ ಸಿ, ಎಸ್ ಟಿ ಹಾಗೂ ಹಿಂದುಳಿದ ವರ್ಗಗಶ ಅಭ್ಯರ್ಥಿಗಳಿಗೆ 27 ವರ್ಷ

ವೇತನ ಶ್ರೇಣಿ – ರೂ.21,000

ಆಸಕ್ತ ಅರ್ಹ ಅಭ್ಯರ್ಥಿಗಳು www.ksp.gov.in ಜಾಲತಾಣಕ್ಕೆ ಭೇಟಿ ನೀಡಿ ಆನ್ ಲೈನ್ ಮೂಲಕ ದಿನಾಂಕ 18-05-2020ರಿಂದ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

( ಸಾಂದರ್ಭಿಕ ಚಿತ್ರ)