ಬೆಂಗಳೂರು: ರಾಜ್ಯ ಸರ್ಕಾರವು ಇಂದು ರಾಜ್ಯದ ನೇಕಾರರಿಗೆ ಲಾಕ್ ಡೌನ್ ವೇಳೆಯ ವಿಶೇಷ ಪರಿಹಾರ ಘೋಷಣೆ ಮಾಡಿದ್ದು, ನೇರ ನಗದು ವರ್ಗಾವಣೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದ್ದಾರೆ.

ನೇಕಾರ ಸಮ್ಮಾನ್ ಯೋಜನೆ ಅಡಿ ನೇಕಾರರಿಗೆ ತಲಾ 2000 ರೂ. ಪರಿಹಾರ ವರ್ಗಾಯಿಸಲಾಗಿದೆ. ಇದಲ್ಲದೆ ರಾಜ್ಯದ ನೇಕಾರರು ವಸತಿ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಾಗಲು ಮತ್ತು ಬಿಪಿಎಲ್ ಕಾರ್ಡ್ ನ ಅಡಿ ಪ್ರತೀ ತಿಂಗಳು ಪಡಿತರ ಪಡೆಯಲೂ ಕೂಡ ಅರ್ಹರಿರುತ್ತಾರೆ ಎಂದು ಹೇಳಿದ್ದಾರೆ.!