ನವದೆಹಲಿ : ಕಳೆದ ಇತ್ತೀಚೆಗೆ ಕೊರೋನಾ ಸೋಂಕಿನಿಂದಾಗಿ ನಿಧರಾದಂತ ಸಂಸದ ಅಶೋಕ್ ಗಸ್ತಿಯವರಿಂದ ತೆರವಾದಂತ ರಾಜ್ಯಸಭಾ ಒಂದು ಸ್ಥಾನಕ್ಕೆ, ಇದೀಗ ಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ 1, 2020ರಂದು ಮತದಾನ ನಡೆಯಲಿದ್ದು, ಅಂದೇ ಮತ ಎಣಿಕೆ ಕೂಡ ನಡೆಯಲಿದೆ.

ಈ ಕುರಿತಂತೆ ಚುನಾವಣಾ ಆಯೋಗ ಚುನಾವಣಾ ದಿನಾಂಕ ಪ್ರಕಟಿಸಿದ್ದು, ಸಂಸದ ಅಶೋಕ್ ಗಸ್ತಿ ನಿಧನದಿಂದ ತೆರವಾದಂತ ರಾಜ್ಯ ಸಭಾ ಸ್ಥಾನಕ್ಕೆ ಡಿಸೆಂಬರ್ 1ರಂದು ಮತದಾನ ನಡೆಸಲಾಗುತ್ತಿದೆ. ಅಂದೇ ಮತಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಿವುದಾಗಿ ತಿಳಿಸಿದೆ.