ವಿಜಯಪುರ: ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪಯವ್ರು ನೂತನ ಸಚಿವರ ಅಂತಿಮ ರಾಜ್ಯಭವನಕ್ಕೆ ಕಳಿಹಿಸಿಕೊಟ್ಟಿದ್ದಾರೆ. ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ, ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದ್ದು,‌ ಶಾಸಕ ಬಸವರಾಜ್‌ ಯತ್ನಾಳ್‌ ಸಿಡಿದೆದ್ದಿದ್ದಾರೆ.

ಈ ಹಿಂದೆ  ಪಕ್ಷಕ್ಕೆ ದುಡಿದವರ ಕೋಟಾ, ಜಾತಿವಾರು ಕೋಟಾ, ಜಿಲ್ಲಾವಾರು ಕೋಟಾ ಅಂತಾ ಇತ್ತು. ಆದ್ರೆ, ಸಧ್ಯ ಇರುವುದು ಬ್ಲ್ಯಾಕ್‌ ಮೇಲ್‌ ಕೋಟಾ, ಹಣದ ಕೋಟಾ. ಹೌದು, ಸಿ.ಡಿಯದ್ದು ಒಂದು ಕೋಟಾವಾದ್ರೆ, ಸಿ.ಡಿ ಮತ್ತು ಹಣ ಕೊಟ್ಟವರದ್ದು ಮತ್ತೊಂದು ಕೋಟಾ. ಮುಖ್ಯಮಂತ್ರಿ ಯಡಿಯೂರಪ್ಪ ಅವ್ರ ಸಿಡಿ ಇಟ್ಟುಕೊಂಡು ಯಾರೆಲ್ಲಾ ಬ್ಲ್ಯಾಕ್‌ ಮೇಲ್‌ ಮಾಡ್ತಾರೋ ಅವ್ರಿಗೆ ಮಂತ್ರಿಗಿರಿ ನೀಡಿದ್ದಾರೆ’ ಎಂದು ಯತ್ನಾಳ್ ಆರೋಪಿಸಿದ್ದಾರೆ.

ಇನ್ನು ‘ಯಡಿಯೂರಪ್ಪ ಅವ್ರ ರಕ್ತ ಸಂಬಂಧಿಯೊಬ್ಬರ ಮುಖಾಂತರ ಯಡಿಯೂರಪ್ಪ ಅವ್ರ ಸಿಡಿ ವಿಚಾರ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್‌ ಮಾಡಿ ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಕೆಲವೊಬ್ಬರು ಹಣ ನೀಡಿ ಮಂತ್ರಿ ಸ್ಥಾನ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.