ನವದೆಹಲಿ : ಇದೇ ತಿಂಗಳು 25ರಂದು ಕೊನೆಗೊಳ್ಳುತ್ತಿರುವ ರಾಜ್ಯ ನಾಲ್ಕು ರಾಜ್ಯಸಭಾ ಸದಸ್ಯರಾದ , ಡಿ.ಕುಪೇಂದ್ರ ರೆಡ್ಡಿ, ಪ್ರಭಾಕರ್ ಕೋರೆ, ರಾಜೀವ್ ಗೌಡ ಎಂ ವಿ ಮತ್ತು ಬಿಕೆ ಹರಿಪ್ರಸಾದ್ ಅವರ ಅವಧಿ ಕೊನೆಗೊಳ್ಳುತ್ತದೆ.

ಅದರಂತೆ ಜೂನ್ 23ರಂದು ಕೊನೆಗೊಳ್ಳುತ್ತಿರುವ ಅರುಣಾಚರ ಪ್ರದೇಶದ 1 ಸ್ಥಾನಕ್ಕೆ ಮತ್ತು ಜುಲೈ 18ರಂದು ಕೊನೆಗೊಳ್ಳುತ್ತಿರುವ ಮಿಜೋರಾಂ ನ ಒಂದು ರಾಜ್ಯ ಸಭಾ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ 19-06-2020ರಂದು ಚುನಾವಣೆ ನಡೆಸುವುದಾಗಿ ಘೋಷಣೆ ಮಾಡಿದೆ.

ರಾಜ್ಯದಲ್ಲಿ ದಿನಾಂಕ 25-06-2020ರಂದು ರಾಜ್ಯಸಭೆಗೆ ಆಯ್ಕೆಯಾಗಿದ್ದಂತ ಡಿ.ಕುಪೇಂದ್ರ ರೆಡ್ಡಿ, ಪ್ರಭಾಕರ್ ಕೋರೆ, ರಾಜೀವ್ ಗೌಡ ಎಂ ವಿ ಮತ್ತು ಬಿಕೆ ಹರಿಪ್ರಸಾದ್ ಅವರ ಅವಧಿ ಮುಕ್ತಾಯಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಈ ತೆರವಾಗುತ್ತಿರುವ ಸ್ಥಾನಗಳಿಗೆ ದಿನಾಂಕ 19-06-2020ರಂದು ಚುನಾವಣೆ ನೆಡಸುವುದಾಗಿ ಘೋಷಣೆ ಮಾಡಿದೆ.
02-06-2020ರಿಂದ ಅನ್ವಯವಾಗುವಂತೆ ಚುನಾವಣಾ ಅಧಿಸೂಚನೆ ಹೊರಡಿಸಿದೆ. ರಾಜ್ಯಸಭಾ ಸ್ಥಾನಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09-06-2020ರಂದು ಆಗಿರುತ್ತದೆ. ಹೀಗೆ ಸಲ್ಲಿಕೆಯಾದಂತ ನಾಮಪತ್ರಗಳನ್ನು ದಿನಾಂಕ 10-06-2020ರಂದು ಪರಿಶೀಲನೆ ನಡೆಯಲಿದೆ. ದಿನಾಂಕ 12-06-2020 ಸಲ್ಲಿಕೆಯಾದಂತ ನಾಮಪತ್ರಗಳನ್ನು ವಾಪಾಸ್ ಪಡೆಯಲು ಕೊನೆಯ ದಿನಾಂಕವಾಗಿರುತ್ತದೆ. ದಿನಾಂಕ 19-06-2020ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆ ಅರುಣಾಚರ ಪ್ರದೇಶದ 1, ಕರ್ನಾಟಕದ 4 ಮತ್ತು ಮಿಜೋರಾಂ ನ ಒಂದು ರಾಜ್ಯಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಅಂದೇ ಮತ ಎಣಿಕೆ ಸಂಜೆ 5 ಗಂಟೆಗೆ ನಡೆಯಲಿದೆ.