ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಶಾಲಾ ಶಿಕ್ಷಕರಿಗೂ ಮಧ್ಯಂತರ ರಜೆ ಘೋಷಿಸಿದ್ದು, ಇದೀಗ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೂ ದಸರಾ ರಜೆ ನೀಡಲು ತೀರ್ಮಾನಿಸಿದೆ.

ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ದಿನಾಂಕ.21.10.2020 ರಿಂದ 01.11.2020 ರವರೆಗೆ ಪದವಿಪೂರ್ವ ಶಿಕ್ಷಣ‌ ಉಪನ್ಯಾಸಕರುಗಳಿಗೆ ದಸರಾ‌ ರಜೆ ಘೋಷಿಸಲು ಇಲಾಖಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.