ತುಮಕೂರು: ರಾಜ್ಯದಲ್ಲಿ ಮೋದಿ ಎಲ್ಲೆ ಸ್ಪರ್ಧಿಸಿದರೆ ಅವರನ್ನು ನಾವು ಸೋಲಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ತುಮಕೂರು ಕೋರ ಗ್ರಾಮದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕರ್ನಾಟಕದಲ್ಲಿ ಮೋದಿ ಅವರು ಸ್ಪರ್ಧಿಸಲು ಬಯಸಿದ್ದಾರಂತಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ಮೋದಿ ಅವರು ಕರ್ನಾಟಕದ ಯಾವುದೇ ಮೂಲೆಯಲ್ಲಿ ಸ್ಪರ್ಧಿಸಲಿ. ಚುನಾವಣೆಯಲ್ಲಿ ನಾವು ಅವರನ್ನು ಎದುರಿಸಿ ಸೋಲಿಸಲು ಮುಂದಾಗುತ್ತೇವೆ ಎಚಿದು ಹೇಳಿದರು.