ಬೆಂಗಳೂರು; ಪುಟ್ಟ ಮಕ್ಕಳಿಗೆ ಆನ್‌ ಲೈನ್‌ ಶಿಕ್ಷಣ ನೀಡುವ ಬಗ್ಗೆ ನಡೆಯುತ್ತಿದ್ದ ಚರ್ಚೆಗೆ ಇಂದು ತೆರೆ ಬಿದ್ದಿದ್ದು, LKG-UKG ಸೇರಿ 5ನೇ ತರಗತಿವರೆಗಿನ ಮಕ್ಕಳಿಗೆ ಆನ್‌ ಲೈನ್‌ ಶಿಕ್ಷಣ ನೀಡುವಂತಿಲ್ಲ, ಅದಕ್ಕಾಗಿ ಶುಲ್ಕ ತೆಗೆದುಕೊಳ್ಳುವಂತ್ತಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದಾರೆ.

ಆನ್ ಲೈನ್ ಶಿಕ್ಷಣ ರದ್ದತಿ ಕುರಿತಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಪುಟ್ಟ ಮಕ್ಕಳಿಗೆ ಆನ್ ಲೈನ್ ನೀಡುವುದು ಮಾನಸಿಕ ಸಾಮರ್ಥ್ಯವನ್ನು ಕುಂಠಿತ ಮಾಡುತ್ತದೆ’ ಎಂದರು.