ಧಾರವಾಡ: ರಾಜ್ಯದಲ್ಲಿ 6 ರಿಂದ 8 ದಿನಗಳವರೆಗೆ ತಡವಾಗಿ ಮುಂಗಾರು ಮಳೆ ಬರಲಿದೆ. . ಆರಂಭದ ಮುಂಗಾರು ಮಳೆಗಳು ದುರ್ಬಲವಾಗಲಿದೆ ಎಂದು ಹವಾಮಾನ ಇಲಾಖೆ ಮುಖ್ಯಸ್ಥ ಆರ್.ಎಚ್.ಪಾಟೀಲ ಸಲಹೆ ನೀಡಿದರು.

ಧಾರವಾಡದ ಕೃಷಿ ವಿವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹವಾಮಾನ ಇಲಾಖೆ ಮುಖ್ಯಸ್ಥ ಆರ್.ಎಚ್.ಪಾಟೀಲ ಮಾಹಿತಿ ಹಂಚಿಕೊಂಡು ಮಳೆ ತಡವಾಗುತ್ತಿರುವ ಕಾರಣ ರೈತರು ಹೊಲದಲ್ಲಿ ಚೌಕು ಮಡಿಗಳನ್ನು ಮಾಡಿ ಮಣ್ಣಿನ ತೇವಾಂಶ ಹೆಚ್ಚಿಸಬೇಕು

ಧಾರವಾಡ ಜಿಲ್ಲೆಯಲ್ಲಿ ಬಿಸಿಲು 40 ಡಿಗ್ರಿ ದಾಟಿದೆ. ಉತ್ತರ ಕರ್ನಾಟಕದಲ್ಲಿಯೂ ಬಿಸಿಲು ಹೆಚ್ಚಾಗಿದೆ. ಮಾರ್ಚ್‌ , ಏಪ್ರಿಲ್‌, ಮೇ ತಿಂಗಳ ಮುಂಗಾರು ಮಳೆ ಗಮನಿಸಿದಾಗ ದಕ್ಷಿಣ ಒಳನಾಡಿನಲ್ಲಿ 106.5 ಮಿಮೀ ವಾಡಿಕೆ ಇದ್ದರೆ, 80.3 ಮಿ.ಮೀ, ಉತ್ತರ ಒಳನಾಡು 59.7 ಮಿಮೀ ವಾಡಿಕೆ ಇದ್ದರೆ, 23.5 ಮಿಮೀ, ಮಲೆನಾಡು 108.2 ಮಿ.ಮೀ ವಾಡಿಕೆ ಮಳೆ ಇದ್ದರೆ, 51.4 ಕರಾವಳಿ ವಾಡಿಕೆ ಮಳೆ 118.5 ಮಿ.ಮೀ ಇದ್ದರೆ 51.4 ಕಡಿಮೆ ಮಳೆ ಆಗಿದೆ.

ಒಟ್ಟಾರೆ ಮಳೆಯ ದಿನಗಳು ಕಡಿಮೆ ಆಗಿವೆ. ಹೀಗಾಗಿ ರೈತರು ಪರ್ಯಾಯ ಬೆಳೆಗಳನ್ನು ಬೆಳೆಯಬೇಕೆಂದು ಹೇಳಿದರು.