ಬೆಂಗಳೂರು : ರಾಜ್ಯಕ್ಕೆ ನೈರುತ್ಯ ಮುಂಗಾರು ಮಾರುತಗಳು ರಾಜ್ಯಕ್ಕೆ ಪ್ರವೇಶಿಸಿದ್ದು, ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಿರೀಕ್ಷೆಯಂತೆ ಜೂನ್ 1 ರಂದು ಕೇರಳ ರಾಜ್ಯ ಪ್ರವೇಶಿಸಿದ ಮುಂಗಾರು ಮಾರುತಗಳು, ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಈ ನಡುವೆ ನಿಸರ್ಗಾ ಚಂಡಮಾರುತದ ಗಾಳಿಯು ಮೋಡಗಳನ್ನು ಬೇರೆಡೆಗೆ ಕೊಂಡೊಯಯ್ಯುತ್ತಿರುವುದರಿಂದ ಮಳೆ ಅಬ್ಬರ ಸ್ವಲ್ಪ ನಿಧಾನವಾಗಿರಲಿದೆ ಎಂದು ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ. ಮುಂದಿನ ವಾರದಿಂದ ಮುಂಗಾರು ಮಾರುತಗಳ ಚಲನೆ ಚುರಕಾಗಲಿದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಮುಂಗಾರು ಮಳೆಯಾಗಲಿದೆ.