ನವದೆಹಲಿ: ಈ ಹಿಂದೆ ಕೋಲಾರದಲ್ಲಿ ರೈಲು ಬೋಗಿ ಉತ್ಪಾದನಾ ಘಟನಾ ನಿರ್ಮಿಸಲಾಗುವುದೆಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ, ಈ ಯೋಜನೆಯನ್ನು ಕೈಬಿಟ್ಟಿರುವ ಸರ್ಕಾರ ಉತ್ಪಾದನಾ ಘಟಕದ ಬದಲಿಗೆ ಬೋಗಿ ದುರಸ್ತಿ ಘಟಕ ಆರಂಭಿಸಲು ಮುಂದಾಗಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಕಲಬುರ್ಗಿಯಲ್ಲಿ ಮಂಜೂರಾದ ಜವಳಿ ಪಾರ್ಕ್ ಕಾಮಗಾರಿ ಕೂಡ ನಿಲ್ಲಿಸಲಾಗಿದೆ. ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಈ ಯೋಜನೆಯನ್ನೂ ಕೈಬಿಡಲಾಗಿದೆ. ಕೇಂದ್ರದ ಈ ನಡೆಯಿಂದ ಉದ್ಯೋಗ ಸೃಷ್ಟಿಗೆ ದೊಡ್ಡ ಹೊಡೆತ.