ಬೆಂಗಳೂರು: ಮುಂಗಾರು ಪೂರ್ವದಲ್ಲಿಯೇ ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದೀಗ ಮುಂಗಾರು ಮಳೆ ಕೂಡ 5 ದಿನ ಮೊದಲೇ ಕೇರಳ ತೀರ ಪ್ರವೇಶಿಸಲಿದ್ದು, 1 ವಾರದೊಳಗೆ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅರಬ್ಬಿ ಸಮುದ್ರದಲ್ಲಿ ಇನ್ನೊಂದು ವಾರಗಳ ಕಾಲ ಅಧಿಕ ಉಷ್ಣತೆ ಉಂಟಾಗುವ ಹಿನ್ನೆಲೆ ಕಡಿಮೆ ಒತ್ತಡ ಏರ್ಪಡಲಿದೆ. ಇದರಿಂದ ವಾಯುಭಾರ ಕುಸಿತವಾಗುವ ಸಾಧ್ಯತೆ ಇದ್ದು, ಧಾರಾಕಾರ ಮಳೆಯಾಗಲಿದೆ ಎಂದು ಹೇಳಿದೆ.