ಬೆಂಗಳೂರು: ಇಂದು ಸಚಿವ ಸಂಪುಟ ವಿಸ್ತರಣೆ ಆಗಿದೆ. ಆಗಲೇ ಶುರುವಾಗಿದೆ ದೋಸ್ತಿ ಸರಕಾರದಲ್ಲಿ ಗಡಬಡ.!

ಜೆಡಿಎಸ್ ಶಿರಾ ಶಾಸಕ ಬಿ.ಸತ್ಯನಾರಾಯಣ ಅವರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಗರಂ ಆದ ಬೆನ್ನೆಲ್ಲೆ ಈ ಗ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ನಾನು ರಾಜೀನಾಮೆ ನೀಡಲು ರೆಡಿ ಅಂತ ಹೇಳಿದ್ದಾರೆ.

ಏಕೆಂದರೆ ಶಿವಮೊಗ್ಗ ಜಿಲ್ಲೆಯ ಆರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಗೆದಿದ್ದಾರೆ. ಭದ್ರಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಗೆದಿರುವವರು ಸಂಗಮೇಶ್ವರ್ ಮಾತ್ರ ಹಾಗಾಗಿ ತನಗೆ ಸಚಿವ ಸ್ಥಾನ ನೀಡುವ ಭರವಸೆ ಇತ್ತು ಈ ಗನೋಡಿದ್ರೆ  ಸಚಿವ ಸ್ಥಾನ ಕೈ ತಪ್ಪಿದೆ ಹಾಗಾಗಿ ತಮ್ಮ ಬೆಂಬಲಿಗರ ಜೊತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಸಮಯ ಬಿದ್ದರೆ ರಾಜೀನಾಮೆ ನೀಡಲು ರೆಡಿ ಎಂದು ಹೇಳಿದ್ದಾರೆ.