ಬೀದರ್‌ ; ಬೀದರ್ ಜಿಲ್ಲೆಯ ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಹಾಗೂ ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ ಅವರಲ್ಲಿ ಕೊರೋನಾ ಸೋಂಕು.!

ಇವರ ಅಂಗರಕ್ಷಕ, ಕಚೇರಿ ಸಹಾಯಕರಿಗೂ ಸೋಂಕು ತಗುಲಿದೆ. ಆದರೆ ಕುಟುಂಬದ ಸದಸ್ಯರಿಗೆ ಸೋಂಕು ತಗುಲಿಲ್ಲ. ಇನ್ನು, ಸಂಸದ ಭಗವಂತ ಖೂಬಾ ಅವರ ಕುಟುಂಬದ ಸದಸ್ಯರು, ಕಚೇರಿ ಸಹಾಯಕರ‌ ವೈದ್ಯಕೀಯ ವರದಿ ನೆಗೆಟಿವ್‌ ಬಂದಿದೆ ಎಂದು ತಿಳಿದುಬಂದಿದೆ.