ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ವಿನಾಯಕ ದೇವರ ದರ್ಶನಕ್ಕೆ ಬಂದ ಮಾಜಿ ಪ್ರಧಾನಿ ಮಂತ್ರಿ ಹೆಚ್.ಡಿ.ದೇವೇಗೌಡರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ನಾನು ಇಲ್ಲಿಗೆ ರಾಜಕೀಯ ಮಾಡಲು ಬಂದಿಲ್ಲ. ದೇವರ ದರ್ಶನ ಹಾಗೂ ಸ್ನೇಹಿತರ ಮನೆಯ ಮದುವೆಯಲ್ಲಿ ಪಾಲ್ಗೋಳ್ಳಲು ಬಂದಿದ್ದೇನೆ ಎಂದು ಹೇಳುತ್ತಲೇ, ಮುಂಬರುವ  ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹಲವು ಬಾರಿ ಹೇಳಿದ್ದ ಇದೀಗ ಬಿಜೆಪಿ ವಿರೋಧಿ ಪಕ್ಷಗಳ ತೃತೀಯ ರಂಗದ ನೇತೃತ್ವ ವಹಿಸಿಕೊಳ್ಳುವ ಸಾಧ್ಯತೆಯ ಸುಳಿವು ನೀಡಿದ್ದಾರೆ.

ತೃತೀಯ ರಂಗವನ್ನು ಮುನ್ನೆಡೆಸುವ ಅವಕಾಶ ಸಿಗುತ್ತದೆ. ಅದಕ್ಕಿನ್ನೂ ಸಮಯವಿದೆ. ಮುಂದೆ ನೋಡೋಣ ಎಂದರು.

ವಿಧಾನಸಭೆ ಚುನಾವಣೆಗೆ ಮುನ್ನ ಇಡಗುಂಜಿಗೆ ಬಂದಿದ್ದೆ. ನನ್ನ ಬೇಡಿಕೆಯನ್ನು ದೇವರು ಈಡೇರಿಸಿದ್ದಾನೆ. ಹಾಗಾಗಿ ಲೋಕಸಭೆ ಚುನಾವಣೆ ಗೆಲುವಿಗಾಗಿ ಪ್ರಾರ್ಥಿಸಿದ್ದೇನೆ. ಫಲಿತಾಂಶದ ನಂತರ ಮತ್ತೆ ಬರುತ್ತೇನೆ  ಎಂದು ಹೇಳಿರುವ ಮಾತ ಅರ್ಥವನ್ನು ವಿರೋಧಿಗಳು ಬೇರೆ ರೀತಿಯಲ್ಲಿಯಲ್ಲಿಯೇ ಊಹೆಮಾಡಿಕೊಳ್ಳುತ್ತಿದ್ದಾರೆ.