ಬೆಂಗಳೂರು : ನನ್ನನ್ನು ರಾಜಕೀಯದಲ್ಲಿ ಗುರುತಿಸಿ ಬೆಳೆಸಿದ್ದು ರಾಮಕೃಷ್ಣ ಹೆಗಡೆ, ದೇವೇಗೌಡರ ಅಲ್ಲ ಅಂತ ಹೇಳಿದ್ದು ಮುಖ್ಯ ಮಂತ್ರಿ ಸಿದ್ದರಾಮಯ್ಯರು. ಯಾವಾಗಲು ದೇವೇಗೌಡರು ನನ್ನನ್ನು ಬೆಳೆಸಿದ್ದೇನೆ ಎನ್ನುತ್ತಾರೆ. ನನ್ನನ್ನು ಮೊದಲಿಗೆ ಗುರುತಿಸಿ ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ಮಾಡಿದ್ದು ರಾಮಕೃಷ್ಣ ಹೆಗಡೆಯವರು ಎಂದು ತಮ್ಮ ಮನದಾಳ ಮಾತನ್ನು ಹೇಳಿದ್ದಾರೆ ಸಿದ್ದರಾಮಯ್ಯರು.

ಬೆಂಗಳೂರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆಯವರೇ ನನ್ನನ್ನು ಮಂತ್ರಿಯನ್ನಾಗಿ ಮಾಡಿದ್ದು ಎಂದು ಹೇಳಿರುವ ಜೊತೆಗೆ ಪಕ್ಷವನ್ನು ಕಟ್ಟಿ ಬೇಳಸಿದವರಲ್ಲಿ  ನಾನು ಜೆ.ಹೆಚ್. ಪಟೇಲ್, ಬೊಮ್ಮಾಯಿ, ಹೆಗಡೆ, ಪ್ರಕಾಶ್, ಸಿಂಧ್ಯಾ, ಪಕ್ಷ ಕಟ್ಟಲಿಲ್ಲವೇ ಎಂದು ದೇವೇಗೌಡರನ್ನು ಪ್ರಶ್ನಿಸಿದ್ದಾರೆ.!

ನಮ್ಮೆಲ್ಲರ ಪರಿಶ್ರಮದ ಫಲವಾಗಿ 1994 ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂತು. ದೇವೇಗೌಡರು ಒಬ್ಬ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಿಎಂ, ಪಿಎಂ ಆಗಿದ್ದವರು. ಆದರೆ ಅವರು ನನ್ನನ್ನು ಬೆಳೆಸಿದ್ದೇನೆ ಎಂದು ಎನ್ನುವುದು ಸರಿಯಲ್ಲ ಎಂದು ದೇವೇಗೌಡರಿಗೆ ಚಾಟಿ ಬೀಸಿದ್ದಾರೆ ಸಿದ್ದರಾಮಯ್ಯ.!