ಚಿತ್ರದುರ್ಗ:  ರಾಜಕೀಯಕ್ಕೆ ಬರುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ ಎಂದು ಯುವರಾಜ ಯದುವೀರ ಒಡೆಯರ್ ಹೇಳಿದ್ದಾರೆ.

ಕೋಟೆನಾಡಿಗೆ ಏಳು ಸುತ್ತಿನ ಕೋಟೆ ಹಾಗೂ ಪಾಳೇಗಾರರ ಅಧಿದೇವತೆ ಏಕನಾಥೇಶ್ವರಿ ಅಮ್ಮನವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ,  ಅಮಿತ್ ಷಾ ಅವರು ರಾಜಮಾತೆ ಪ್ರಮೋದಾದೇವಿ ಮತ್ತು ನನ್ನನ್ನು ಭೇಟಿ ಮಾಡಿದ್ರು ನನಗೆ ಸಧ್ಯಕ್ಕೆ ರಾಜಕೀಯಕ್ಕೆ ಬರುವುದಿಲ್ಲ ಎಂದರು.

ಆದರೆ ರಾಜ್ಯ ಸಭೆಗೆ ಆಯ್ಕೆ ಮಾಡಿರುವ ಬಗ್ಗೆ ಯಾವುದೇ ರೀತಿಯ ಆಫರ್ ನೀಡಿಲ್ಲ, ಆದರೆ ಜನರು ಬಯಸಿದರೆ ಮುಂದೆ ರಾಜಕೀಯಕ್ಕೆ ಬರುತ್ತೇನೆ ಎಂದರು.

ರಾಜ್ಯದ ಎಲ್ಲಾ ಸಂಸ್ಥಾನಗಳನ್ನು ಸಂಪರ್ಕಿಸುವ ಕಾರಿಡಾರ್ ಮಾಡುವ ಚಿಂತನೆ ಇದೆ, ಆ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬಹುದು ಎಂದರು.