ಬೆಂಗಳೂರ: : ಚುನಾವಣೆ ಹತ್ತಿರ ಬರುತಿದ್ದಂತೆ ಮತದಾರರನ್ನು ಓಲೈಸಲು ಬಹಿರಂಗ ಸಭೆಗಳಲ್ಲಿ ಕಣ್ಣೀರಾಕುವುದು ಮತದಾರರನ್ನು ಸಳೆಯಲು. ತಾನೇನು ತಪ್ಪು ಮಾಡಿದ್ದೇನೆ ಕ್ಷಮಿಸಿ ಎಂದು ಕೇಳುವುದು ಸರ್ವೆಸಾಮಾನ್ಯವಾಗಿದೆ.

ಆದರೆ  ಮಂಡ್ಯ ಲೋಕಸಭಾ ಉಪಚುನಾವಣೆಯ ಜೆಡಿಎಸ್  ಅಭ್ಯರ್ಥಿ ಎಲ್‍ಆರ್.ಶಿವರಾಮೇಗೌಡ ಅವರು ಬಹಿರಂಗ ಸಭೆಯಲ್ಲಿ ಕಣ್ಣೀರಿಟ್ಟಿದ್ದಾರೆ.

ಮಂಡ್ಯ ಜಿಲ್ಲೆ, ನಾಗಮಂಗಲ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಸುಮಾರು 25 ವರ್ಷಗಳ ಹಿಂದೆ ನಡೆದ ಪತ್ರಕರ್ತನ ಗಂಗಾಧರ ಮೂರ್ತಿ ಕೊಲೆ ಪ್ರಕರಣ ನೆನೆದು ಕಣ್ಣೀರು ಹಾಕಿದ್ದಾರೆ.

ಪತ್ರಕರ್ತನ ಕೊಲೆ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಬಂದಿತ್ತು. ಆರೋಪ ಕೇಳಿ ಬಂದ ಬಳಿಕ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೆ. ದೇವರೇ ನನಗೂ ಅದಕ್ಕೂ ಸಂಬಂಧವಿಲ್ಲ. ಈ ಬಗ್ಗೆ ನಿಮಗೆ ಗೊತ್ತು. ಬೇರೆಯವರಿಗೆ ಗೊತ್ತಿಲ್ಲ. ಆದರೆ ನಾನು ನಿರಪರಾಧಿ ಎಂಬುದು ಬಳಿಕ ಸಾಬೀತಾಯ್ತು ಎಂದರು.

ಕುಹಕ:-

(ನಮ್ಮಲ್ಲಿ ಒಂದು ಗಾದೆ ಮಾತಿದೆ ಅಳುವ ಗಂಡಸರನ್ನು ನಗುವ ಹೆಂಗಸರನ್ನು( ಮಹಿಳೆಯರನ್ನು) ನಂಬಬಾರದು ಅಂತ. ಆದರೆ ಈ ಸುದ್ದಿಗೂ ಯಾವುದೇ ಸಂಬಂಧವಿಲ್ಲ.)..!