ಬೆಂಗಳೂರು ಕಳೆದ 11 ದಿನಗಳಿಂದ  ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರು ಒಂದಲ್ಲಾ ಒಂದು ಹೇಳಿಕೆಗಳು ಊಹಾ ಪೂಹಾ ಚರ್ಚೆಗಳು ನಡೆಯುತ್ತಲೇ ಇವೆ. ವಿಡಿಯೋದಲ್ಲಿ ಬಂದ ಸಿದ್ದರಾಮಯ್ಯರ ಮಾತುಗಳು ಮಾಧ್ಯಮದಲ್ಲಿ ಚರ್ಚೆ ಆಗುತ್ತಲೇ ಇವೆ .

ಆದ್ರೆ ಇಂದು ಅಹಿಂದ ಮುಖಂಡರುಗಳು ಸಿದ್ದರಾಮಯ್ಯರನ್ನು ಭೇಟಿ ಸಭೆ ನಡೆಸಿದ್ದಾರಂತೆ. ಅಹಿಂದ ನಾಯಕರುಗಳು .

ಭೇಟಿ ಮಾಡಿದ ಅಹಿಂದ ನಾಯಕರುಗಳು ಯಾರಂದರೆ, ಸಚಿವ ರಮೇಶ್ ಜಾರಕಿ ಹೊಳಿ ನೇತೃತ್ವದಲ್ಲಿ ಆಗಮಿಸಿದ್ದ ಮುಖಂಡರುಗಳು ಹಾಗೂ   ಮಾಜಿ ಸಚಿವ ಎಚ್.ಆಂಜನೇಯ ಕೆಲ ಕಾಲ ರಹಸ್ಯ ಸಭೆಯಲ್ಲಿ ಪಾಲ್ಗೊಂಡು ನಂತರ ಅಲ್ಲಿಂದ ಹಿಂತಿರುಗಿದ್ದಾರೆ. ಅಹಿಂದ ನಾಯಕರುಗಳ ಭೇಟಿಯಿಂದ ನಾಳೆ ನಗರಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿರುವುದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವುದು ಸುಳ್ಳೇನಲ್ಲಾ.