ಅಧಿಕಾರಿಗಳು ಮಾತು ಕೇಳುತ್ತಿಲ್ಲ .ಸ್ವಚ್ಚತಗೆ ಮೊದಲ ಆಧ್ಯತೆ
ಚಿತ್ರದುರ್ಗ: ನಗರಸಭೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಕಳೆಪೆ ಆಗಿಲ್ಲ ಎಂದು ನಗರಸಭೆ ಅಧ್ಯಕ್ಷ ಕಾಂತರಾಜ್ ಸ್ಪಷ್ಟಪಡಿಸಿದರು. ಪತ್ರಕರ್ತರಭವನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಬಿಜೆಪಿ ಅಧ್ಯಕ್ಷರು ಹಾಗೂ ಶಾಸಕರು ರಸ್ತೆ ಕಾಮಗಾರಿ ಗುಣ ಮಟ್ಟ ಕಳಪೆಯಿಂದ ಕೂಡಿದ್ದು ಇದರ ವಿರುದ್ಧ ಪ್ರತಿಭಟನೆಗಳನ್ನು ನಡೆಸಲಾಗುತ್ತದೆ ಎಂದು ಹೇಳುತ್ತಾರೆ. ಕಳೆದ ಸಲ ಶಾಸಕರು ಎಂಎಲ್ಸಿ ಆಗಿದ್ದಾಗ ಕ್ರಿಯಾ ಯೋಜನೆ ತಯಾರುಮಾಡಲಾಗುತ್ತು. ಕೆಲವು ಕಡೆ ಡಾಂಬಾರು ಇನ್ನೂ ಕೆಲವು ಕಡೆ ಮೆಟ್ಲಿಂಗ್ ಮಾಡಬೇಕೆಂದು ಸರ್ಕಾರಕ್ಕೆ ಪ್ರಸ್ಥಾವನೆಯನ್ನು ಕಳುಹಿಸಿಕೊಡಲಾಗಿತ್ತು ಅದರಂತೆ ರೆಸ್ತೆ ಕಾಮಗಾರಿ ನಡೆಸಲಾಗುತ್ತಿದೆ ಮೊದಲು ಬಿಜೆಪಿಯವರಿಗೆ ರಸ್ತೆಗೆ ಮಾತನಾಡುವುದಕ್ಕಿಂತ ಶಾಸಕರು ಕ್ರಿಯಾಯೋಜನೆ ಮಾಡುವಾಗ ಏನು ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡಿದರು. ಶಾಸಕರು ತಮ್ಮ ಮನೆಗೆ ಕುಡಿಯವ ನೀರನ್ನು ರೈಜಿಂಗ್ ಪೈಪ್ ನಿಂದ ತೆಗೆದುಕೊಂಡಿದ್ದಾರೆ ಮತ್ತು ಪಾರ್ಕ್ ಜಾಗವನ್ನು ಒತ್ತುವರಿಮಾಡಿದ್ದಾರೆ ಅದರ ಬಿಜೆಪಿ ಮುಖಂಡರು ಏಕೆ ಮಾತನಾಡುತ್ತಿಲ್ಲ ಎಂದು ತಿರುಗೇಟು ನೀಡಿದರು.
ನಗರಕ್ಕೆ ಶಾಂತಿಸಾಗರ ಮತ್ತು ಮಾರಿಕಣಿವೆಯಿಂದ ನಗರಕ್ಕೆ ನೀರು ಸರಬರಾಜು ಆಗಿತ್ತಿದ್ದು ಅದರ ವಿಲೆವಾರಿಗೆ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ. ಮತ್ತು ಶಾಂತಿಸಾಗರದಿಂದ ನೀರು ಬರುವ ಮಾರ್ಗ ಮಧ್ಯೆ ಪೈಪ್ ಲೈನ್‌ಗಳು ದುರಸ್ತಿಯಲ್ಲಿವೆ ಅವುಗಳನ್ನು ಸರಿಪಡಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತೇವೆ. ಹಾಗೂ ಮಾರ್ಗ ಮಧ್ಯೆ ಇರುವ ಟ್ಯಾಂಕ್‌ಗಳನ್ನು ಸ್ವಚ್ಚತೆಗಾಗಿ ಒಂದು ವಾರದ ಕಾಲ ನೀರಿನ ಸಮಸ್ಯೆ ಉಂಟಾಗುತ್ತದೆ ಆಗ ಮಾತ್ರ ನಗರದ ಜನೆತೆ ಸುಧಾರಿಸಿಕೊಳ್ಳ ಬೇಕಾಗುತ್ತದೆ ಎಂದರು.
ನಗರಸಭೆಗೆ ಬಂದಿರುವ ಅನುಧಾನ ಸುಮಾರು ೨ ಕೋಟಿ ರೂಗಳನ್ನು ಕುಡಿಯುವ ನೀರಿಗೆ ಖರ್ಚುಮಾಡಲಾಗುವುದು ಮುಂದಿನ ದಿನಗಳಲ್ಲಿ ನಗರದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.
ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ೨೦೧೫-೨೦೧೬ ನೇ ಸಾಲಿನಲ್ಲಿ ೧೫೬೩ ಮನೆಗಳಿಗೆ ೬೬೦ ಜನರು ಮಾತ್ರ ಫಲಾನುಭವಿಗಳು ಡಿ.ಡಿ.ಯನ್ನು ತಗೆಸಿದ್ದಾರೆ ಉಳಿದಿರವ ಮನೆಗಳಿಗೆ ಮತ್ತೆ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.