ದಾವಣಗೆರೆ: ರಮೇಶ್ ಜಾರಕಿಹೊಳಿ ಬಿಜೆಪಿಗೆ ಹೋಗುವುದಾದರೆ ಹೋಗಲಿ. ಆ ಗಿರಾಕಿ ಬಿಜೆಪಿಗೆ ಹೋಗುತ್ತೆ ಅಂತಾ ಗೊತ್ತಿತ್ತು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ದಾವಣಗೆರೆಯ ಐಎಂಎ ಹಾಲ್ ಮತಗಟ್ಟೆ 110ರಲ್ಲಿ ಪುತ್ರರಾದ ಎಸ್.ಎಸ್. ಗಣೇಶ್, ಎಸ್.ಎಸ್.ಬಕ್ಕೇಶ್ ಹಾಗೂ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಶಾಮನೂರು ಶಿವಶಂಕರಪ್ಪ ಮತ ಚಲಾಯಿಸಿದರು.

ವೇಳೆ ಮಾತನಾಡಿದ ಅವರು, ಯಾರೇ ಹೋದರು ಮೈತ್ರಿ ಸರ್ಕಾರಕ್ಕೆ ಯಾವ ಆತಂಕ ಇಲ್ಲ. ದೋಸ್ತಿ ಸರ್ಕಾರ ಮುಂದುವರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.