ಚಿಕ್ಕಮಗಳೂರು: ನಟರು ದೇಶದ ಆಸ್ತಿ. ಯಾವೊಬ್ಬ ಕಲಾವಿದರು ಒಂದು ಭಾಷೆಗೆ ಸೀಮಿತರಾದವರಲ್ಲ ಎಂದು ಕಾಲ ಸಿನಿಮಾದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈಶ್ವರಪ್ಪ ಉತ್ತರಿಸಿದರು.

ಇತ್ತೀಚೆಗೆ ರಜನೀಕಾಂತ್ ಅವರು ನಟಿಸಿದ ಸಿನಿಮಾ ಕಾಲ ರಾಜ್ಯದಲ್ಲಿ ಬಿಡುಗಡೆಗೆ ಸಂಬಂಧಿಸಿದಂತೆ ಹೇಳಿಕೆಗಳ ಬಗ್ಗೆ ಮಾತನಾಡಿದ ಈಶ್ವರಪ್ಪನವರು ನಮ್ಮ ನಾಡಿನ ಡಾ.ರಾಜಕುಮಾರ್ ಅವರು ಈ ದೇಶದ ಆಸ್ತಿ ಆಗಿದ್ದರು. ಒಂದು ಸಿನಿಮಾದಲ್ಲಿ ಬೇರೆ ಭಾಷೆಯ ಬಗ್ಗೆ ಅಥವ ಶ್ರದ್ಧಾಕೇಂದ್ರಗಳ ಬಗ್ಗೆ ಅವಹೇಳನಕಾರಿ ಸಿನಿಮಾ ಮಾಡಿದ್ರೆ ಖಂಡಿಸ ಬೇಕು ಅದು ಬಿಟ್ಟು ಇದೇ ರೀತಿಯಾಗಿ ಪ್ರತಿಭಟನೆ ಮಾಡಿದ್ರೆ ಮುಂದೆ ನಮ್ಮ ಸಿನಿಮಾಗಳ ಬಗ್ಗೆ ಬೇರೆಯವರು ಪ್ರಶ್ನೆ ಮಾಡುತ್ತಾರೆ. ಹಾಗಾಗಿ ಪ್ರತಿಭಟನೆ ಮಾಡಿದ್ರೆ ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.